ಗೋಳಿತಟ್ಟು ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

ಗೋಳಿತಟ್ಟು ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

ಗೋಳಿತಟ್ಟು ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ಜೂ.21 ರಂದು ಆಚರಿಸಲಾಯಿತು.

ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜೋನ್ ಕೆ.ಪಿ ಯೋಗದ ಮಾರ್ಗದರ್ಶನ ನೀಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲ ಗೌಡ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿಯ ಸಿ ಎಚ್ ಒ ಸುಧಾ ಉಪಸ್ಥಿತರಿದ್ದರು.

ಶಾಲಾ ನಾಯಕಿ ಶರಣ್ಯ ಎಲ್ಲಾ ವಿದ್ಯಾರ್ಥಿಗಳಿಗೆ ಯೋಗಾಸನ ಮಾಡಿಸಿದಳು. ಮುಖ್ಯ ಶಿಕ್ಷಕಿ ಜಯಂತಿ ಬಿ.ಎಂ ಸ್ವಾಗತಿಸಿದರು. ಶಿಕ್ಷಕ ತೇಜಸ್ವಿ.ಕೆ, ಅಬ್ದುಲ್ ಲತೀಫ್.ಸಿ, ಮನ್ವಿತ.ಡಿ, ಯಶಸ್ವಿನಿ ಅವರು ಉಪಸ್ಥಿತರಿದ್ದು ಸಹಕರಿಸಿದರು.

Leave a Reply

You May Have Missed

error: Content is protected !!