ಕಾರು ಅಪಘಾತಕ್ಕೀಡಾಗಿ: ಇಬ್ಬರಿಗೆ ಗಂಭೀರ ಗಾಯ

ಕಾರು ಅಪಘಾತಕ್ಕೀಡಾಗಿ: ಇಬ್ಬರಿಗೆ ಗಂಭೀರ ಗಾಯ

ಸಂಪಾಜೆ ಬಳಿ ಕಾರೊಂದು ಅಪಘಾತಕ್ಕೀಡಾಗಿದ್ದು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ.

ಕಾರಿನವರು ಮಂಡ್ಯ ಮೂಲದ ನಾಲ್ವರು ಫೋಟೋ ಗ್ರಾಫರ್ಸ್ ಹೊನ್ನಾವರದಲ್ಲಿ ತಮ್ಮ ಕೆಲಸ ಮುಗಿಸಿ ವಾಪಸ್ ಮಂಡ್ಯಕ್ಕೆ ಹೊರಟಿದ್ದರು. ಈ ವೇಳೆ ಸಂಪಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಯ ರಕ್ಷಣಾ ಗೋಡೆಗೆ ಢಿಕ್ಕಿಯಾಗಿದೆ. ಕಾರಿನೊಳಗೆ ಕಬ್ಬಿಣದ ತಡೆಗೋಡೆ ನುಗ್ಗಿದೆ. ಢಿಕ್ಕಿಯ ರಭಸಕ್ಕೆ ಕಾರು ಛಿದ್ರವಾಗಿದೆ.

ಅಪಘಾತದ ತೀವ್ರತೆಗೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

You May Have Missed

error: Content is protected !!