ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಪಾಲಕರ ಹಬ್ಬ

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಪಾಲಕರ ಹಬ್ಬ

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಪಾಲಕರ ಹಬ್ಬವನ್ನು ಭಾನುವಾರ ಬೆಳಗ್ಗೆ 10.30 ಕ್ಕೆ ಹಬ್ಬದ ಪವಿತ್ರ ಬಲಿಪೂಜೆ ಅರ್ಪಿಸುವುದರೊಂದಿಗೆ ಸಂತರಿಗೆ ಗೌರವವನ್ನು ಸಲ್ಲಿಸಲಾಯಿತು.

ಪ್ರಧಾನ ಯಾಜಕರಾಗಿ ಮಂಗಳೂರು ಧರ್ಮಪ್ರಾಂತ್ಯದ ಖಜಾಂಜಿ ವಂ.ಜಗದೀಶ್ ಲೂಯಿಸ್ ಪಿಂಟೋ, ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರು ವಂ.ಗ್ರೇಶನ್ ಅಲ್ವಾರಿಸ್, ವಂ.ಅಶೋಕ್ ಡಿಸೋಜ, ದೇವಾಲಯದ ಧರ್ಮಗುರು ವಂ.ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ಸಹ ಯಾಜಕರಾಗಿ ಬಲಿಪೂಜೆಯನ್ನು ಅರ್ಪಿಸಿದರು.

ಸಂತರ ಅನುಗ್ರಹದಿಂದ ದೊರೆತ ವಿವಿಧ ಉಪಕಾರಗಳನ್ನು ಸ್ಮರಿಸಿ ಭಕ್ತಾದಿಗಳು ಕಾಣಿಕೆಗಳನ್ನು ನೀಡಿದರು. ದೇಣಿಗೆ ನೀಡಿದ ಭಕ್ತಾದಿಗಳಿಗೆ ಮೊಂಬತ್ತಿ ನೀಡಿ ಗೌರವಿಸಲಾಯಿತು. ಚರ್ಚ್‌ನ ಧರ್ಮಗುರು ವಂ.ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ಹಬ್ಬದ ಶುಭಾಶಯವನ್ನು ಕೋರಿ ವಂದಿಸಿದರು. ಭೋಜನದೊಂದಿಗೆ ಕೊನೆಗೊಂಡಿತು.

Leave a Reply

You May Have Missed

error: Content is protected !!