ನೆಲ್ಯಾಡಿಯಲ್ಲಿ ಪೈಂಟ್ಸ್ ಮಾರಾಟ ಮಳಿಗೆ ಎಂ.ಐ ಎಂಟರ್‌ಪ್ರೈಸಸ್ ಶುಭಾರಂಭ

ನೆಲ್ಯಾಡಿಯಲ್ಲಿ ಪೈಂಟ್ಸ್ ಮಾರಾಟ ಮಳಿಗೆ ಎಂ.ಐ ಎಂಟರ್‌ಪ್ರೈಸಸ್ ಶುಭಾರಂಭ

ನೆಲ್ಯಾಡಿ: ಪೈಂಟ್ಸ್ ಮಾರಾಟ ಮಳಿಗೆ ಎಂ.ಐ.ಎಂಟರ್‌ಪ್ರೈಸಸ್ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಬಳಿ ಜೂ.26ರಂದು ಬೆಳಿಗ್ಗೆ 11 ಗಂಟೆಗೆ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಮಾಲಕರ ಮಾತೃಶ್ರೀ ಪುಲುಸು ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ನೆಲ್ಯಾಡಿ ಬದ್ರಿಯಾ ಜುಮ್ಮ ಮಸ್ಜೀದ್ ಧರ್ಮಗುರುಗಳಾದ ಬಹು ಶೌಕಾತಾಲಿ ಅಮಾನಿ ಖತೀಬರು ಧಾರ್ಮಿಕ ವಿಧಿಯನ್ನು ನೆರವೇರಿಸಿ ಶುಭ ಹಾರೈಸಿದರು.

ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್, ನೋಟರಿ ವಕೀಲರಾದ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ಆನಂದ, ಲೆಕ್ಕಪರಿಶೋಧಕರಾದ ಅಂಗು, ಪಂಚಾಯಿತಿನ ಸದಸ್ಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಹಿತಮಿತ ದರದಲ್ಲಿ ಎಲ್ಲಾ ಕಂಪನಿಗಳ ಪೈಂಟ್ಸ್ ನಮ್ಮಲ್ಲಿ ದೊರೆಯುತ್ತದೆ ಎಂದರು. ಅಲ್ಲದೆ ಎಲ್ಲರ ಸಹಕಾರವನ್ನು ಕೋರಿ ಆಗಮಿಸಿದ ಎಲ್ಲರಿಗೂ ಸ್ವಾಗತಿಸಿ ವಂದಿಸಿದರು ಸಂಸ್ಥೆ ಮಾಲಕ ನೆಲ್ಯಾಡಿ ಗ್ರಾ.ಪಂ.ಸದಸ್ಯ ಮೊಹಮ್ಮದ್ ಇಕ್ಬಾಲ್‌ರವರು.

Leave a Reply

You May Have Missed

error: Content is protected !!