ಕೊಕ್ಕಡ : ಕಾರು ಮತ್ತು ಬೈಕ್ ಗಳ ಮಧ್ಯೆ ಅಪಘಾತ

ಕೊಕ್ಕಡ : ಕಾರು ಮತ್ತು ಬೈಕ್ ಗಳ ಮಧ್ಯೆ ಅಪಘಾತ

ಕೊಕ್ಕಡ :ಕೌಕ್ರಾಡಿ ಗ್ರಾಮದ ನೆಕ್ಕರ್ಲ ಎಂಬಲ್ಲಿ ಕಾರು ಮತ್ತು ಬೈಕ್ ಗಳ ಮಧ್ಯೆ ಅಪಘಾತ ನಡೆದು ಬೈಕ್ ಸವಾರ ಹಾಗೂ ಸಹ ಸವಾರ ಗಾಯಗೊಂಡ ಘಟನೆ ಜೂ.25ರಂದು ನಡೆದಿದೆ.

ಸೌತಡ್ಕ ದೇವಸ್ಥಾನದ ಕಡೆಯಿಂದ ಮುಖ್ಯದ್ವಾರದ ಕಡೆಗೆ ಸುಬ್ರಹ್ಮಣ್ಯದ ಹರ್ಷಿತ್ ಹಾಗೂ ಹರಿಶ್ಚಂದ್ರ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕಿಗೆ ಎದುರುಗಡೆಯಿಂದ ಭರತ್ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿ. ಬೈಕ್ ಸವಾರ ಹಾಗೂ ಸಹ ಸವಾರ ಬೈಕಿನೊಂದಿಗೆ ರಸ್ತೆಗೆ ಬಿದ್ದು ಗಾಯವಾಗಿದ್ದು ಹರ್ಷಿತ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು, ಹರಿಶ್ಚಂದ್ರ ಅವರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.

ಹರ್ಷಿತ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!