ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ

ನೆಲ್ಯಾಡಿ:1978 ಜೂನ್ 1ರಂದು ಪೋಳಿಕಾರ್ಪಸ್ ಮೋರ್ ಗೀವರ್ಗೀಸ್ ಅವರ ನೇತೃತ್ವದಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಈ ಶಿಕ್ಷಣ ಸಂಸ್ಥೆಯು ಹಂತ ಹಂತವಾಗಿ ಬೆಳೆದು ಬಂದಿದೆ. ಶಿಸ್ತಿನ ಶಿಕ್ಷಣ ನೀಡುವುದರಲ್ಲಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಕೊಡುಗೆ ಅಪಾರವಾದದ್ದು, ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಈ ಶಿಕ್ಷಣ ಸಂಸ್ಥೆ ನೀಡಿದ ಶಿಕ್ಷಣವೇ ಸಾಕ್ಷಿಯಾಗಿದೆ ಎಂದು ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಉಪಾಧ್ಯಕ್ಷ ವಂ.ರೆ.ಪಿ.ಕೆ ಅಬ್ರಹಾಂ ಕೋರ್ ಎಪಿಸ್ಕೋಪಾ ಹೇಳಿದರು.

ಸಂತ ಜಾರ್ಜ್ ವಿದ್ಯಾಸಂಸ್ಥೆಗಳ ಸಂಸ್ಥಾಪನಾ ದಿನಾಚರಣೆ, ಕಾಲೇಜು ಸಂಸತ್ತಿನ ವಾರ್ಷಿಕ ಚಟುವಟಿಕೆಗಳ ಶುಭಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜೂ. 29ರಂದು ಉದ್ಘಾಟಿಸಿ ಮಾತನಾಡಿದರು.

ಕಕ್ಕಿಂಜೆ ಸೈಂಟ್ ಮೇರೀಸ್ ಚಾಕೋಬೈಟ್ ಸಿರಿಯನ್ ಚರ್ಚ್ ನ ವಿಕಾರ್ ವೆ.ರೆ.ಕುರಿಯಾಕೋಸ್ ಕವಣಾಟೇಲ್ ಕೋರ್ ಎಪಿಸ್ಕೋಪಾ ಅವರು ಸಂತ ಜಾರ್ಜ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡುವುದರಿಂದ, ಇಲ್ಲಿ ಕಲಿತ ವಿದ್ಯಾರ್ಥಿಗಳು ಶಿಸ್ತು ಬದ್ಧವಾದ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ದಿವ್ಯಚೇತನ ಚಾಪಲ್ ನಲ್ಲಿ ಕೃತಜ್ಞತಾ ಬಲಿ ಪೂಜೆ ನಡೆಯಿತು, ಗೈಡ್ಸ್ ವಿದ್ಯಾರ್ಥಿಗಳಿಂದ ಶಿಕ್ಷಕಿ ಪ್ರಪುಲ್ಲಾ, ಜೆಸಿಂತಾ ಡಿಸೋಜಾ ಅವರ ನೇತೃತ್ವದಲ್ಲಿ ಸರ್ವಧರ್ಮ ಪ್ರಾರ್ಥನೆ, 2024-25ನೇ ಸಾಲಿನ ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಸ್ಥೆಯ ಸಂಚಾಲಕ ನೋಮಿಸ್ ಕುರಿಯಕೋಸ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ಪ್ರತಿಜ್ಞಾವಿಧಿಯನ್ನು ಪ್ರಾಚಾರ್ಯರಾದ ಎಲಿಯಾಸ್ ಎಮ್.ಕೆ ಬೋಧಿಸಿದರು.

ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಆಶಿಕ್ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಸಂಸ್ಥೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್. ಎನ್ ಶುಭಾಸಂಶನೆ ಮಾಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ವಹಿಸಿದ್ದರು.

ವೇದಿಕೆಯಲ್ಲಿ ಪುತ್ತೂರು ಕ್ಷೇತ್ರಾಧಿಕಾರಿ ಲೋಕೇಶ್.ಎಸ್.ಆರ್, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಕೊಣಾಲು ಚರ್ಚ್ ನ ಧರ್ಮಗುರುಗಳಾದ ಅನಿಲ್ ಪಾರಿಚ್ಚೇರಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಾಯಕಿ ಇಂಚರ.ವಿ ಗೌಡ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆಶಿಕ್, ಕನ್ನಡ ಮಾಧ್ಯಮದ ವಿಭಾಗದ ಉಪಾಧ್ಯಕ್ಷ ಆದಿರ, ಕಾರ್ಯದರ್ಶಿ ಸಾನ್ವಿ, ಆಂಗ್ಲ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಪುನೀತ್, ಕಾರ್ಯದರ್ಶಿ ತ್ರಿಷಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ಸ್ಟೀಪನ್, ಪದಾಧಿಕಾರಿ ಪಾಪಚ್ಚನ್ ನಿವೃತ್ತ ಶಿಕ್ಷಕರು, ಪೂರ್ವ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.

ಸನ್ಮಾನ
ಸಂಸ್ಥೆಯ ಹಳೆ ವಿದ್ಯಾರ್ಥಿ ಕೋರ್ ಎಪಿಸ್ಕೋಪಾ ಪದವಿಯನ್ನು ಪಡೆದ ಕಕ್ಕಿಂಜೆ ಸೈಂಟ್ ಮೇರೀಸ್ ಚಾಕೋಬೈಟ್ ಸಿರಿಯನ್ ಚರ್ಚ್ ನ ವಿಕಾರ್ ವೆ.ರೆ.ಕುರಿಯಾಕೋಸ್ ಕವಣಾಟೇಲ್ ಕೋರ್ ಎಪಿಸ್ಕೋಪಾ ಅವರನ್ನು ಹಾಗೂ 2023-24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಪುರಸ್ಕರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಯೋಜಕರಾದ ಸಿನಿ ಜಾರ್ಜ್, ಜೆಸಿಂತಾ ಡಿಸೋಜ ಸಹಕರಿಸಿದರು. ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕ ಹರಿಪ್ರಸಾದ್.ಕೆ ಸ್ವಾಗತಿಸಿದರು. ಕನ್ನಡ ಮಾಧ್ಯಮದ ಮುಖ್ಯಶಿಕ್ಷಕ ತೋಮಸ್ ಎಂ.ವೈ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು.

Previous post

ಶಿಬಾಜೆ: ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

Next post

ಶಿರಾಡಿ ಘಾಟ್ ನಲ್ಲಿ ಸರಣಿ ಅಪಘಾತ: ಐರಾವತ- ರಾಜಹಂಸ ಮುಖಾಮುಖಿ ಡಿಕ್ಕಿ; ಚರಂಡಿಗೆ ಬಿದ್ದ ಈಚರ್ ಲಾರಿ

Leave a Reply

You May Have Missed

error: Content is protected !!