ಅರಸಿನಮಕ್ಕಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಪುಷ್ಪರಾಜ್ ಕೆ.ಸಿ ಸೇವಾ ನಿವೃತ್ತಿ- ಬೀಳ್ಕೊಡುಗೆ

ಅರಸಿನಮಕ್ಕಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಪುಷ್ಪರಾಜ್ ಕೆ.ಸಿ ಸೇವಾ ನಿವೃತ್ತಿ- ಬೀಳ್ಕೊಡುಗೆ

ಕೊಕ್ಕಡ: ಅರಸಿನಮಕ್ಕಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿಂದ ನಿವೃತ್ತರಾಗುತ್ತಿರುವ ಪುಷ್ಪರಾಜ್. ಕೆ.ಸಿ ಇವರಿಗೆ ಬಿಳ್ಕೊಡುಗೆ ಸಮಾರಂಭ ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಪ್ರಾ.ಕೃ.ಪ.ಸ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಸಭಾಧ್ಯಕ್ಷತೆ ವಹಿಸಿ ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ನಿರ್ದೇಶಕ ಧರ್ಮರಾಜ ಗೌಡ, ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್, ಪುಷ್ಪರಾಜ್ ಕೆ.ಸಿ ಉಪಾಧ್ಯಕ್ಷ ಸುಧೀರ್ ಕುಮಾರ್ ಎಮ್.ಎಸ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಶಾಖಾ ಪ್ರಬಂಧಕ ಸತ್ಯನಾರಾಯಣ, ಅರಸಿನಮಕ್ಕಿ ಪಂಚಾಯತ್ ಪಿಡಿಓ ಜಯರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಗಮಿಸಿದ ಅತಿಥಿಗಳು ಪುಷ್ಪರಾಜ್ ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಅಬ್ಬಾಸ್ ಅಸರ್ ಸ್ವಾಗತಿಸಿದರು. ಬ್ಯಾಂಕಿನ ಸಿಬ್ಬಂದಿ ವಂದನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!