ಕೊಕ್ಕಡ- ಓಣಿತ್ತಾರು : ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನರ್ತನ ಸೇವೆ.

ಕೊಕ್ಕಡ- ಓಣಿತ್ತಾರು : ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನರ್ತನ ಸೇವೆ.

ನೇಸರ ಫೆ.18: ಮಳಿ ಕುಟುಂಬದ ಶ್ರೀ ದುರ್ಗಾಪರಮೇಶ್ವರಿ ಸಪರಿವಾರ ಸಾನಿಧ್ಯಗಳ ದೇವಸ್ಥಾನ ಕೊಕ್ಕಡ – ಓಣಿತ್ತಾರು ಎಂಬಲ್ಲಿ ದಿನಾಂಕ 19-02-2022 ನೇ ಶನಿವಾರ ದಂದು ಬ್ರಹ್ಮಶ್ರೀ ಎಡಮನೆ ದಾಮೋದರ ತಂತ್ರಿಯವರ ಹಾಗೂ ಬಾಲಕೃಷ್ಣ ಕೆದಿಲಾಯ ರವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ದೈವಗಳ ನರ್ತನ ಸೇವೆ.

ಮನೆಮನೆ ಯಕ್ಷಗಾನ ವೀಕ್ಷಿಸಿ, Subscribers ಮಾಡಿ

ಬೆಳಗ್ಗೆ 8ಕ್ಕೆ ಗಣಪತಿ ಹೋಮ,ನವಕ ಅಭಿಷೇಕ,ಮುಡಿಪು ಪೂಜೆ,ನಾಗತಂಬಿಲ,ದೈವಗಳಿಗೆ ತಂಬಿಲ.ಮಧ್ಯಾಹ್ನ 12:30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ.ಸಂಜೆ 6 ರಿಂದ ರಂಗಪೂಜೆ ಮತ್ತು ದೈವಗಳ ಭಂಡಾರ ತೆಗೆಯುವುದು.ರಾತ್ರಿ ಗಂಟೆ 8.30 ರಿಂದ ಅನ್ನಸಂತರ್ಪಣೆ, ದೇವಿ ಭಂಟತಿ ಕಲ್ಲುರ್ಟಿಗೆ ನೇಮ, ಹೊಸಳಿಗಮ್ಮ ಮತ್ತು ಹಲ್ಲತ್ತಾಯ ದೈವಗಳಿಗೆ ಏಕಕಾಲದಲ್ಲಿ ನೇಮ, ಕುಟುಂಬ ದೈವ ವರ್ಣಾರ ಪಂಜುರ್ಲಿ ಮತ್ತು ಕಲ್ಲುರ್ಟಿಗೆ ಏಕಕಾದಲ್ಲಿ ನೇಮ ನಡೆಯಲಿರುವುದು ಎಂದು ಆಡಳಿತ ಸಮಿತಿ ಮತ್ತು ಮಳಿ ಕುಟುಂಬಸ್ಥರು ತಿಳಿಸಿದರು.

 

 

—ಜಾಹೀರಾತು—

 

Leave a Reply

You May Have Missed

error: Content is protected !!