ಪದ್ಮುಂಜ: ಅಕ್ರಮವಾಗಿ ಅತಿಕ್ರಮಣ ಮಾಡಿ ರಸ್ತೆ ಬದಿ ಬೇಲಿ ಹಾಕಿದ್ದನ್ನು ತೆರವುಗೊಳಿಸಿದ ಅಧಿಕಾರಿಗಳು

ಪದ್ಮುಂಜ: ಅಕ್ರಮವಾಗಿ ಅತಿಕ್ರಮಣ ಮಾಡಿ ರಸ್ತೆ ಬದಿ ಬೇಲಿ ಹಾಕಿದ್ದನ್ನು ತೆರವುಗೊಳಿಸಿದ ಅಧಿಕಾರಿಗಳು

ಪದ್ಮುಂಜ : ಕಣಿಯೂರು ಗ್ರಾಮದ ಪದ್ಮುಂಜ ಕ್ವಾಟ್ರಾಸ್ ನಿಂದ ಪುದೊಟ್ಟು ದೈವಸ್ಥಾನಕ್ಕೆ ಹೋಗುವ ಪಂಚಾಯತ್ ರಸ್ತೆಯನ್ನು ಖಾಸಗಿಯವರು ಅಕ್ರಮವಾಗಿ ಅತಿಕ್ರಮಣ ಮಾಡಿ ರಸ್ತೆ ಬದಿ ಬೇಲಿ ಹಾಕಿದ್ದನ್ನು ಪಂಚಾಯತ್ ನೋಟಿಸ್ ಮಾಡಿ ತದನಂತರ ತಹಸೀಲ್ದಾರ್ ಆದೇಶದಂತೆ ಕೊಕ್ಕಡ ಹೋಬಳಿ ಕಂದಾಯ ನೀರಿಕ್ಷಕರಾದ ಪಾವಡಪ್ಪ ದೊಡ್ಡಮನಿ ಹಾಗೂ ಗ್ರಾಮಕಾರಣಿಕ ಉಷಾ ರವರು ಸ್ಥಳಕ್ಕೆ ಬೇಟಿ ನೀಡಿ ಅಕ್ರಮ ಬೇಲಿ ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಕಣಿಯೂರು ಪಂಚಾಯತ್ ಅಧ್ಯಕ್ಷರಾದ ಯಶವಂತ. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್. ಪಂಚಾಯತ್ ಸದಸ್ಯರಾದ ಅಮಿತ್. ಗಾಯತ್ರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!