ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿ ಕಾಲೇಜಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ


ನೇಸರ 29: ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯಲ್ಲಿ ಕಾಲೇಜು ಸಂಸತ್ತಿನ ಕಾರ್ಯಚಟುವಟಿಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಅಬ್ರಹಾಂ ವರ್ಗೀಸ್ ವಹಿಸಿದರು ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅವರ ಜವಾಬ್ದಾರಿ, ಕಾರ್ಯಚಟುವಟಿಗಳಲ್ಲಿ ನಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಸಂಸತ್ತು ಎಂದರೇನು, ಕಲಿಕೆಯೊಂದಿಗೆ ನಾವು ಉತ್ತಮ ನಾಯಕರಾಗಿ ಹೇಗೆ ಬೆಳೆಯಬಹುದು, ವಿದ್ಯಾರ್ಥಿ ಸಂಘಟನೆಯನ್ನು ನಕರಾತ್ಮಕವಾಗಿ ಬಳಸಿಕೊಳ್ಳದೆ, ತನ್ನ ಹಾಗೂ ಸಂಸ್ಥೆಯ ಬೆಳವಣಿಗೆಗೆ ಗುರುಗಳ ಮಾರ್ಗದರ್ಶನದೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದಾಗಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಖ್ಯ ಅತಿಥಿ ಗುಡ್ಡಪ್ಪ ಬಲ್ಯ ಉಪನ್ಯಾಸಕರು ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜು ರಾಮಕುಂಜ ತಿಳಿಸಿದರು.
ಕಾಲೇಜು ಸಂಸತ್ತಿನ 2021 – 22 ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳು:ಅಧ್ಯಕ್ಷರಾಗಿ ಮಹಮ್ಮದ್ ಸಾಬಿತ್. ಎಂ, ಪ್ರಧಾನ ಕಾರ್ಯದರ್ಶಿ ನಿತೇಶ್ ಕುಮಾರ್. ಆರ್ಕನ್ನಡ ಮಾಧ್ಯಮ ವಿಭಾಗ: ಉಪಾಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ವೈಶಾಲಿ. ಬಿಆಂಗ್ಲ ಮಾಧ್ಯಮ ವಿಭಾಗ: ಉಪಾಧ್ಯಕ್ಷ ಶರೋನೆ ರೋಯಿ, ಕಾರ್ಯದರ್ಶಿ ಮಿಲನ್ ಕುಮಾರ್ |














Leave a Reply