ನೆಲ್ಯಾಡಿ ಜೇಸಿಐ ಮತ್ತು ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಬ್ಯಾಂಕ್ ನ ಪ್ರಬಂಧಕರಿಗೆ ಸನ್ಮಾನ

ನೆಲ್ಯಾಡಿ ಜೇಸಿಐ ಮತ್ತು ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ಬ್ಯಾಂಕ್ ನ ಪ್ರಬಂಧಕರಿಗೆ ಸನ್ಮಾನ

ನೆಲ್ಯಾಡಿ ಜೇಸಿಐ ಹಾಗೂ ನೆಲ್ಯಾಡಿ- ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ವತಿಯಿಂದ ವರ್ಗಾವಣೆಯೊಂದಿಗೆ ಪದೋನ್ನತಿ ಪಡೆದ ಬ್ಯಾಂಕ್ ನ ಪ್ರಬಂಧಕರಿಗೆ ಸನ್ಮಾನ ಕಾರ್ಯಕ್ರಮ ಜು.4ರಂದು ನಡೆಯಿತು.

ನೆಲ್ಯಾಡಿ ಯೂನಿಯನ್ ಬ್ಯಾಂಕ್ ನಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಬಂಧಕರಾಗಿ ಸೇವೆ ಸಲ್ಲಿಸಿ ಇದೀಗ ಪದೋನ್ನತಿ ಹೊಂದಿ ವರ್ಗಾವಣೆಗೊಳ್ಳುತ್ತಿರುವ ಅಲೋಕ್ ಮೌರ್ಯ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಜೇಸಿಐ ಅಧ್ಯಕ್ಷೆ ಸುಚಿತ್ರ.ಜೆ ಬಂಟ್ರಿಯಾಲ್, ವರ್ತಕ ಸಂಘದ ಅಧ್ಯಕ್ಷ ಸತೀಶ್.ಕೆ, ಗೌರವಾಧ್ಯಕ್ಷ ರಫೀಕ್ ಸೀಗಲ್, ಉಪಪ್ರಬಂಧಕ ಸುಧೀರ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿಗಳು, ವರ್ತಕ ಸಂಘದ ಪದಾಧಿಕಾರಿಗಳು ಹಾಗೂ ಜೇಸಿಐ ಸದಸ್ಯರುಗಳು ಹಾಜರಿದ್ದರು.

ಜಯನಂದ ಬಂಟ್ರಿಯಾಲ್ ಪ್ರಾಸ್ತಾವಿಕದೊಂದಿಗೆ ಎಲ್ಲರನ್ನು ಸ್ವಾಗತಿಸಿದರು.

Leave a Reply

You May Have Missed

error: Content is protected !!