ನೆಲ್ಯಾಡಿ: ಉಷಾ ಅಂಚನ್ ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಸಂಯೋಜಕರಾಗಿ ಆಯ್ಕೆ

ನೆಲ್ಯಾಡಿ: ಉಷಾ ಅಂಚನ್ ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಸಂಯೋಜಕರಾಗಿ ಆಯ್ಕೆ

ನೆಲ್ಯಾಡಿ: ಕೆಪಿಸಿಸಿಯ ನಿರ್ದೇಶನದಂತೆ ಉಷಾ ಅಂಚನ್ ನೆಲ್ಯಾಡಿ ಅವರು ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಇದರ ಸಂಯೋಜಕರಾಗಿ ಆಯ್ಕೆ

ಕಡಬ ಬ್ಲಾಕ್ ಕಾಂಗ್ರೆಸ್ ಪಕ್ಷದ ನಿಸ್ವಾರ್ಥ ಸೇವಕಿಯಾಗಿ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಪಕ್ಷದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ, ಡಿಸಿಸಿ ಸದಸ್ಯರಾಗಿ, ರಾಜ್ಯ ಒಬಿಸಿ ಘಟಕದ ಕಾರ್ಯದರ್ಶಿಯಾಗಿ, ಜಿಲ್ಲಾ ಶಿಸ್ತು ಕಮಿಟಿ ಸದಸ್ಯರಾಗಿ, ತಾಲ್ಲೂಕು ಪಂಚಾಯತ್ ಸದಸ್ಯರಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರ ದ ಆರಾಧನ ಸಮಿತಿ ಮಾಜಿ ಸದಸ್ಯರಾಗಿ, ಪಕ್ಷದಲ್ಲಿ ಅಲ್ಲದೇ 5 ಸೇವಾ ಸಹಕಾರಿ ಸಂಘ ಗಳ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಎಲ್ಲಾ ವಿಭಾಗಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನೆಲ್ಯಾಡಿ ಪರಿಸರದಲ್ಲಿ ದಿಟ್ಟ ಹೋರಾಟಗಾರ್ತಿಯಾಗಿ ಪಕ್ಷಕ್ಕೆ ಬಲ ತುಂಬಿದ್ದ ಉಷಾ ಅಂಚನ್ ನೆಲ್ಯಾಡಿ ಅವರು ಡಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಇದರ ಸಂಯೋಜಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!