ಪಟ್ರಮೆ: ನಾಟಿ ವೈದ್ಯ ನಾರಾಯಣ ಉಂಗ್ರುಪುಳಿತ್ತಾಯ ನಿಧನ

ಪಟ್ರಮೆ: ನಾಟಿ ವೈದ್ಯ ನಾರಾಯಣ ಉಂಗ್ರುಪುಳಿತ್ತಾಯ ನಿಧನ

ಕೊಕ್ಕಡ: ಪಟ್ರಮೆ ಗ್ರಾಮದ ಸೂರ್ಯತ್ತಾವು ನಿವಾಸಿ ನಾರಾಯಣ ಉಂಗ್ರುಪುಳಿತ್ತಾಯ(81) ಅವರು ಜು.13ರಂದು ನಿಧನರಾದರು.

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 30 ವರ್ಷಗಳ ಹಿಂದೆ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿ ಇದೀಗ ಕಳೆದ ಮೂರು ವರ್ಷಗಳಿಂದ ಸೂರ್ಯತ್ತಾವು ಎಂಬಲ್ಲಿ ಮನೆಮಾಡಿಕೊಂಡು ಒಬ್ಬರೇ ವಾಸ್ತವ್ಯವಿದ್ದರು.

ಕೆಲವು ದಿನಗಳ ಹಿಂದೆ ಅನಾರೋಗ್ಯ ಕಾಡಿದ್ದಾಗ ಅವರ ಮಕ್ಕಳು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು. ಅವರು ನಾಟಿವೈದ್ಯರೂ ಆಗಿದ್ದರು.

ಮೃತರಿಗೆ ಪುತ್ರ ಪುತ್ರಿ ಹಾಗೂ ಮೊಮ್ಮಕ್ಕಳು ಇದ್ದಾರೆ.

Leave a Reply

You May Have Missed

error: Content is protected !!