ನೆರೆ ನೀರಲ್ಲಿ ತೇಲಿ ಬಂದ ಆನೆ ಮೃತದೇಹ

ನೆರೆ ನೀರಲ್ಲಿ ತೇಲಿ ಬಂದ ಆನೆ ಮೃತದೇಹ

ಸುಬ್ರಹ್ಮಣ್ಯ: ಕುಮಾರಧಾರ ನದಿಯ ನೆರೆ ನೀರಿನಲ್ಲಿ ಆನೆ ಮೃತದೇಹ ತೇಲಿಬಂದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ನಿರಂತರ ಮಳೆಯಿಂದ ತುಂಬಿ ಹರಿಯುತ್ತಿರುವ ನೀರಿನ ಮಟ್ಟವನ್ನು ವೀಕ್ಷಣೆಗೆ ಸೋಮವಾರ ತಡ ರಾತ್ರಿ ಮನ್ಮಥ ಬಟ್ಟೋಡಿ ಮತ್ತಿತರರು ತೆರಳಿದ್ದ ವೇಳೆ ನೆರೆ ನೀರಿನಲ್ಲಿ ತೇಲಿಬರುತ್ತಿರುವುದು ಕಂಡುಬಂದಿದ್ದು ಸೂಕ್ಷ್ಮವಾಗಿ ಗಮನಿಸಿದಾಗ ಆನೆ ಮೃತದೇಹ ಎಂಬುದು ಗೊತ್ತಾಗಿದೆ. ಆನೆ ಕೆಲ ದಿನಗಳ ಹಿಂದೆಯೇ ಎಲ್ಲೋ ಸತ್ತು ಈ ಭಾಗಕ್ಕೆ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಆನೆ ಮೃತದೇಹ ನೀರಿನಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ.

ನಿರಂತರ ಮಳೆಯಿಂದಾಗಿ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಕುಮಾರಧಾರ ಸ್ನಾನಘಟ್ಟ ಮುಳುಗಡೆ ಸ್ಥಿತಿಯಲ್ಲೇ ಇದೆ.

Leave a Reply

You May Have Missed

error: Content is protected !!