ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್: ಧರ್ಮಾಧ್ಯಕ್ಷರ ರಜತ ಸಂಭ್ರಮದ ಭವ್ಯಾಚರಣೆ

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್: ಧರ್ಮಾಧ್ಯಕ್ಷರ ರಜತ ಸಂಭ್ರಮದ ಭವ್ಯಾಚರಣೆ

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರ ಇಪ್ಪತ್ತೈದನೇ ಧರ್ಮಾಧ್ಯಕ್ಷ ವರ್ತಂತಿಯ ಬೆಳ್ಳಿ ಸಂಭ್ರಮವನ್ನು ಅದ್ದೂರಿಯಾಗಿ ನೆಲ್ಯಾಡಿ ಸಂತ ಅಲ್ಫೋನ್ಸ ದೇವಾಲಯದಲ್ಲಿ ನಡೆಸಲಾಯಿತು.

ಆರಳ ಸೆಂಟ್ ಮೇರಿಸ್ ಮತ್ತು ಇಚಿಲಂಪಾಡಿ ಲಿಟಲ್ ಫ್ಲವರ್ ಚರ್ಚ್‌ನ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಭಾಗವಹಿಸಿ ಧರ್ಮಾಧ್ಯಕ್ಷರಿಗೆ ಶುಭಕೋರಿದರು.

ಟೊಮಿ ಮಟ್ಟಮ್, ಜೋಶಿ ಪುಳಿಯಮಾಕ್ಕಲ್, ಶ್ರೀಮತಿ ಜೋಯಿಸಿ ಕವಳಕ್ಕಾಟ್ ಮತ್ತು ಮಾಸ್ಟರ್ ಡೆಲ್ವಿನ್ ಶುಭ ಶುಭನುಡಿಗಳನ್ನಾಡಿದರು. ತ್ರಿವಳಿ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ.ಷಾಜಿ ಮಾತ್ಯು ಸ್ವಾಗತಿಸಿದರು. ಫಾ.ಎಬಿನ್ ವಂದಿಸಿದರು. ಕಾರ್ಯದರ್ಶಿ ಶ್ರೀಮತಿ ಜೆಸ್ಸಿ.ಕೆ.ಜೆ. ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!