ಶಿಶಿಲ ಕಪಿಲ ನದಿಯಲ್ಲಿ ನೀರು ಉಕ್ಕಿ ಹರಿದು ಕಿಂಡಿಅಣೆಕಟ್ಟು ಮುಳುಗಡೆ; ದೇವಸ್ಥಾನದ ಅಂಗಣಕ್ಕೂ ನುಗ್ಗಿದ ನೀರು

ಶಿಶಿಲ ಕಪಿಲ ನದಿಯಲ್ಲಿ ನೀರು ಉಕ್ಕಿ ಹರಿದು ಕಿಂಡಿಅಣೆಕಟ್ಟು ಮುಳುಗಡೆ; ದೇವಸ್ಥಾನದ ಅಂಗಣಕ್ಕೂ ನುಗ್ಗಿದ ನೀರು

ಕೊಕ್ಕಡ: ಇತಿಹಾಸ ಪ್ರಸಿದ್ಧ ಮತ್ಯತೀರ್ಥ ಎಂದೇ ಖ್ಯಾತವಾದ ಶ್ರೀ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲೇ ಹರಿಯುತ್ತಿರುವ ಕಪಿಲ ನದಿಯಲ್ಲಿ ಜು.26ರಂದು ಸಂಜೆ ಸುರಿದ ಬಾರಿ ಮಳೆಗೆ ನಿರಂತರವಾಗಿ ನೀರು ಏರಿಕೆಯಾಗಿ ಕಿಂಡಿ ಆಣೆಕಟ್ಟು ಮುಳುಗಡೆಯಾಗಿದೆ.

ಬೈರಾಪುರ ಘಾಟಿಯಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಕಪಿಲ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಲಾರಂಭಿಸಿದ್ದು, ಪ್ರವಾಹದ ಜೊತೆ ದೊಡ್ಡ ದೊಡ್ಡ ಗಾತ್ರದ ಮರಗಳು ಬರುತ್ತಿದ್ದು ಶಿಶಿಲದ ಕಿಂಡಿಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ನೀರು ಹರಿಯಲು ಅಡ್ಡಿಯಾಗಿದೆ. ದೇವಸ್ಥಾನದ ಅಂಗಣಕ್ಕೂ ನೀರು ಬಂದಿರುವ ಮಾಹಿತಿ ಲಭಿಸಿದೆ.

Leave a Reply

You May Have Missed

error: Content is protected !!