ರಿಕ್ಷಾದ ಮೇಲೆ ಬಿದ್ದ ತೆಂಗಿನ ಮರ; ಅಪಾರ ನಷ್ಟ

ರಿಕ್ಷಾದ ಮೇಲೆ ಬಿದ್ದ ತೆಂಗಿನ ಮರ; ಅಪಾರ ನಷ್ಟ

ಬೀಸಿದ ಭಾರೀ ಸುಂಟರಗಾಳಿಗೆ ತೆಂಗಿನ ಮರವೊಂದು ಮನೆ ಹಾಗೂ ಎರಡು ರಿಕ್ಷಾಗಳ ಮೇಲೆ ಬಿದ್ದು, ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ಹಿರಿಯಡ್ಕ ಸಮೀಪ ಕುಕ್ಕೆಹಳ್ಳಿ ಬಜೆ ಬಳಿ ಜು.26ರ ಶುಕ್ರವಾರ ಮುಂಜಾನೆ ವೇಳೆ 2ರ ವೇಳೆಗೆ ಸಂಭವಿಸಿದೆ.

ಬಜೆಯ ಅಮ್ಮಣ್ಣಿ ಸೇರಿಗಾರ್ತಿ ಎಂಬವರ ಮನೆ ಸಮೀಪದ ತೆಂಗಿನ ಮರ ಬಿದ್ದ ಪರಿಣಾಮ ಮನೆ ಹಾನಿಯಾಗಿದ್ದು, ಮನೆ ಬಳಿ ನಿಲ್ಲಿಸಿದ ಅಮ್ಮಣಿ ಅವರ ಮಕ್ಕಳಾದ ಗಣಪತಿ ಸೇರಿಗಾರ ಹಾಗೂ ರವಿ ಸೇರಿಗಾರ ಎಂಬವರ ಅಟೋ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿವೆ.

ಸುತ್ತಮುತ್ತಲಿನ ಪರಿಸರದಲ್ಲಿ ಹಲವಾರು ಮರಗಳು ಧರೆಗುರುಳಿವೆ.

Leave a Reply

You May Have Missed

error: Content is protected !!