ಬೈಕ್- ಬೊಲೆರೋ ಅಪಘಾತ; ಬಾಲಕಿ ಸಾವು

ಬೈಕ್- ಬೊಲೆರೋ ಅಪಘಾತ; ಬಾಲಕಿ ಸಾವು

ಮುಂಡಾಜೆ ಸೀಟು ಬಳಿ ನಡೆದ ಬೈಕ್ & ಬೊಲೆರೋ ಅಪಘಾತದಲ್ಲಿ ಆರನೇ ತರಗತಿ ಬಾಲಕಿ ಮೃತಪಟ್ಟಿದ್ದಾರೆ.

ಮಂಡಾಜೆ ಕಲ್ಮಂಜ ಕುಡೆಂಚಿ ಗುರುಪ್ರಸಾದ್ ಗೋಖಲೆ ಹಾಗೂ ಮಗಳು ಅನರ್ಘ್ಯ(12) ಬೈಕ್ ನಲ್ಲಿ ಉಜಿರೆಯಿಂದ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯ ಬೊಲೆರೋ ಹಿಂದಿನಿಂದ ಢಿಕ್ಕಿ ಹೊಡೆದು ಪರಾರಿಯಾಗಿತ್ತು.

ಘಟನೆಯಲ್ಲಿ ತಂದೆ ಮಗಳು ಇಬ್ಬರೂ ಗಾಯಗೊಂಡಿದ್ದರು. ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಅನರ್ಘ್ಯ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ.

ಅಪಘಾತವಾದ ಬಳಿಕ ತಪ್ಪಿಸಿಕೊಂಡಿದ್ದ ಬೊಲೆರೋ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.

Leave a Reply

You May Have Missed

error: Content is protected !!