ಕೆ.ಡಿ.ಪಿ ಸಭೆಗೆ ಹಾಜರಾಗದ ಅಧಿಕಾರಿಗಳು; ಸಭೆ ರದ್ದುಗೊಳಿಸಿದ ಕೊಕ್ಕಡ ಗ್ರಾ.ಪಂ ಪಂಚಾಯಿತಿ

ಕೆ.ಡಿ.ಪಿ ಸಭೆಗೆ ಹಾಜರಾಗದ ಅಧಿಕಾರಿಗಳು; ಸಭೆ ರದ್ದುಗೊಳಿಸಿದ ಕೊಕ್ಕಡ ಗ್ರಾ.ಪಂ ಪಂಚಾಯಿತಿ

ಕೊಕ್ಕಡ ಗ್ರಾ.ಪಂ ನಲ್ಲಿ ಜು.31ರಂದು ತ್ರೈಮಾಸಿಕ ಕೆ.ಡಿ.ಪಿ ಸಭೆಯು ಗ್ರಾ.ಪಂ.ಅಧ್ಯಕ್ಷೆ ಬೇಬಿರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಕೆ.ಡಿ.ಪಿ ಸಭೆಗೆ 19 ಇಲಾಖೆಯ ಅಧಿಕಾರಿಗಳು ಹಾಜರಾಗಬೇಕಾಗಿದ್ದು, ಸಭೆಯಲ್ಲಿ ಕೇವಲ ಎರಡು ಇಲಾಖೆಗಳಾದ ಪಶುಸಂಗೋಪನಾ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದು, ಸಭೆಯ ಬಗ್ಗೆ ಎಲ್ಲಾ ಇಲಾಖೆಗಳಿಗೆ ಮಾಹಿತಿ ನೀಡಿದ್ದರು. ಬಾರದೇ ಉಳಿದ ಇಲಾಖೆಗಳಿಗೆ ನೋಟಿಸ್ ನ್ನು ನೀಡುವುದಾಗಿ ನಿರ್ಣಯಿಸಿ ಕೆ.ಡಿ.ಪಿ ಸಭೆಯನ್ನು ರದ್ದುಗೊಳಿಸಲಾಯಿತು.

ಪಂಚಾಯಿತಿನ ಉಪಾಧ್ಯಕ್ಷ ಪ್ರಭಾಕರ್ ಗೌಡ, ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಭಾರತಿ, ಪಂಚಾಯಿತಿನ ಸದಸ್ಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!