ಶಿರಾಡಿ ಘಾಟ್ ವಾಹನ ಸಂಚಾರ ರಾತ್ರಿ ವೇಳೆ ಬಂದ್

ಶಿರಾಡಿ ಘಾಟ್ ವಾಹನ ಸಂಚಾರ ರಾತ್ರಿ ವೇಳೆ ಬಂದ್

ನೆಲ್ಯಾಡಿ: ಶಿರಾಡಿ ಘಾಟ್ ನಲ್ಲಿ ಇಂದು ಸಂಜೆ 7ರಿಂದ ನಾಳೆ ಬೆಳಗಿನವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

ಕಳೆದ ರಾತ್ರಿ ಶಿರಾಡಿ ಘಾಟ್ ನ ದೊಡ್ಡತಪ್ಲು ಬಳಿ ಗುಡ್ಡ ಜರಿದು ವಾಹನಗಳ ಮೇಲೆ ಮಣ್ಣು ಬಿದ್ದ ಪರಿಣಾಮ ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಸ್ಥಗಿತ ಗೊಂಡಿತ್ತು. ಆ.1 ಮಧ್ಯಾಹ್ನದ ವೇಳೆ ವಾಹನಗಳ ಸಂಚಾರ ಪುನರಾರಂಭಗೊಂಡಿತ್ತು.

ಇದೀಗ ಮಣ್ಣು ಕುಸಿಯುತ್ತಲೇ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಸಂಚಾರ ಬಂದ್ ಮಾಡಲಾಗಿದೆ.

Leave a Reply

You May Have Missed

error: Content is protected !!