ಶಿಶಿಲ: ಬಾರಿ ಗಾಳಿ ಮಳೆಗೆ ಗೋಡೆ ಬಿರುಕು: ತಾತ್ಕಾಲಿಕವಾಗಿ ಸರಿಪಡಿಸಿದ ಶೌರ್ಯ ವಿಪತ್ತು ತಂಡ

ಶಿಶಿಲ: ಸುರಿಯುತ್ತಿರುವ ಭಾರಿ ಮಳೆಗೆ ಬದಿಗುಡ್ಡೆ ನಿವಾಸಿ ಬಾಲಕ್ಕ ಗೌಡ ಇವರ ಮನೆಯ ಮಾಡು ಕುಸಿತಗೊಂಡಿದ್ದು, ಗೋಡೆ ಬಿರುಕು ಬಿಟ್ಟಿದೆ ಮನೆಯವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಸಿನಮಕ್ಕಿ -ಶಿಶಿಲ ಶೌರ್ಯ ವಿಪತ್ತು ತಂಡದ ಸದಸ್ಯರಾದ ಅವಿನಾಶ್ ಭಿಡೆ, ರಮೇಶ್ ಬೈರಕಟ್ಟ, ನಿತಿನ್ ಬೈರಕಟ್ಟ, ರಾಧಕೃಷ್ಣ ಗುತ್ತು ಮನೆ, ಕುಶಾಲಪ್ಪ ಗೌಡ ಬದ್ರಿಜಾಲು, ಕೃಷ್ಣಪ್ಪ ಗೌಡ ಮುಚ್ಚಿರಡ್ಕ, ಸೀನಪ್ಪ ನಾಯ್ಕ್ ಮುಚ್ಚಿರಡ್ಕ ಮುಂತಾದವರು ಮನೆಯ ಒಳಗಡೆಯಿಂದ ಅಲ್ಲಲ್ಲಿ ಬೇರೆ ಕಂಬಗಳ ಮೂಲಕ ಆಧಾರ ವಾಗಿ ಮನೆಯ ಮೇಲ್ ಚಾವಣಿಯನ್ನು ಯಾವುದೇ ಅಪಾಯ ಬರದಂತೆ ನಿಲ್ಲಿಸಿ ತಾತ್ಕಾಲಿಕವಾಗಿ ನಿಲ್ಲಿಸಿ ಮನೆಯವರಲ್ಲಿ ಧೈರ್ಯ ತುಂಬಿರುತ್ತಾರೆ.
ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಿ ಬಡ ಕುಟುಂಬವನ್ನು ಅಪಾಯದಿಂದ ಪಾರು ಮಾಡಬೇಕೆಂಬುದಾಗಿ ವಿನಂತಿಸಿಕೊಂಡಿದ್ದಾರೆ





















Leave a Reply