ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜು:ಸಿ.ಎ ಸಾಧಕರಿಗೆ ಸನ್ಮಾನ

ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜು:ಸಿ.ಎ ಸಾಧಕರಿಗೆ ಸನ್ಮಾನ

ಉಜಿರೆ: ಪ್ರಸಕ್ತ ವರ್ಷದಲ್ಲಿ ಅಖಿಲ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಸಿ.ಎ ಅಶ್ವಥ್, ಸಿ.ಎ ಸುಕನ್ಯಾ ಕಾಮತ್, ಸಿ.ಎ ಕೇಶವ್ ಕಾಮತ್, ಮತ್ತು ಸಿ.ಎ ಮೆಘೇಶ್ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಗುರಿ, ಪರಿಶ್ರಮದಿಂದ ಸಾಧನೆಯನ್ನು ಮಾಡಬಹುದು. ಅದೇ ರೀತಿ ಸೋತಾಗ ಆತ್ಮ ವಿಶ್ವಾಸ ಕಳೆದು ಕೊಳ್ಳಬಾರದು ಎಂದು ಸಿ.ಎ ಸಾಧಕ ಹಿರಿಯ ವಿದ್ಯಾರ್ಥಿಗಳು ಈಗಿನ ಪಿಯುಸಿಯ ಸಿ.ಎ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್.ಬಿ ಸಾಧಕರನ್ನು ಸನ್ಮಾನಿಸಿ ಶುಭ ಹಾರೈಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ದ್ವಿತೀಯ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಾದ ಭಾರ್ಗವಿ ಭಟ್ ನಿರೂಪಿಸಿದರು. ಕೃತಿ ವಂದಿಸಿದರು.

Leave a Reply

You May Have Missed

error: Content is protected !!