ಸ್ಕೂಟರ್- ಖಾಸಗಿ ಬಸ್ ನಡುವೆ ಢಿಕ್ಕಿ:‌ ಸವಾರನಿಗೆ ಗಾಯ

ಸ್ಕೂಟರ್- ಖಾಸಗಿ ಬಸ್ ನಡುವೆ ಢಿಕ್ಕಿ:‌ ಸವಾರನಿಗೆ ಗಾಯ

ದ್ವಿಚಕ್ರ ವಾಹನ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಘಟನೆ ಸೋಮವಾರ (ಆ.12) ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ದ್ವಿಚಕ್ರ ವಾಹನಕ್ಕೆ ಹಾನಿಯಾಗಿದ್ದು, ಸವಾರ ಸ್ಥಳೀಯ ನಿವಾಸಿ ಮೂಸಂಬಿಲ್ ಎಂಬರಿಗೆ ಗಂಭೀರ ಗಾಯವಾಗಿದೆ. ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಟ್ಲದಿಂದ ಮುಡಿಪು ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಮುಡಿಪು ಕಡೆ ತೆರಳುತ್ತಿದ್ದ ಆಕ್ಟಿವಾ ನಡುವೆ ಅಪಘಾತ ಸಂಭವಿಸಿದೆ.

Leave a Reply

You May Have Missed

error: Content is protected !!