ಭಾರತೀಯ ಮಾಜ್ದೂರು ಸಂಘದ ರಾಜ್ಯ ಅಭ್ಯಾಸ ವರ್ಗಕ್ಕೆ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ‌ ಭೇಟಿ

ಭಾರತೀಯ ಮಾಜ್ದೂರು ಸಂಘದ ರಾಜ್ಯ ಅಭ್ಯಾಸ ವರ್ಗಕ್ಕೆ ಕ್ಯಾ. ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜ‌ ಭೇಟಿ

ಕೊಕ್ಕಡ: ನಿಡ್ಲೆ ಆದಿತ್ಯ ವ್ಯೂನಲ್ಲಿ ನಡೆಯುತ್ತಿದ್ದ ಭಾರತೀಯ ಮಾಜ್ದೂರು ಸಂಘ ಕರ್ನಾಟಕ ರಾಜ್ಯದ ರಾಜ್ಯ ಅಭ್ಯಾಸ ವರ್ಗಕ್ಕೆ ದ.ಕ ಜಿಲ್ಲೆಯ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿದರು.

ಸಂಘಟನೆ ಕಡೆಯಿಂದ ಸಂಸದರನ್ನು ಗೌರವಿಸಲಾಯಿತು, ಗೌರವ ಸ್ವೀಕರಿಸಿ ಮಾತನಾಡಿದ ಸಂಸದರು, ಬಿ ಎಮ್ ಎಸ್ ಸಂಘಟನೆ ವಿಶ್ವದ ಅತೀ ದೊಡ್ಡ ಕಾರ್ಮಿಕ ಸಂಘಟನೆಯಾಗಿದೆ, ಕಾರ್ಮಿಕ ಪರವಾಗಿ ದ್ವನಿ ಎತ್ತುವ ಸಂಘಟನೆ ಈ ಸಂಘಟನೆಯ ಹೋರಾಟದ ಫಲವಾಗಿ ಕೇಂದ್ರ ಸರಕಾರವು ಕಾರ್ಮಿಕ ಕಲ್ಯಾಣಕ್ಕಾಗಿ ವಿಶ್ವಕರ್ಮ ಯೋಜನೆ ತಂದಿದೆ ಇದನ್ನುಅನುಷ್ಠಾನ ಮಾಡುವಲ್ಲಿ ತಮ್ಮ ಸಂಘಟನೆ ಸಹಕಾರಬೇಕು. ಕಾರ್ಮಿಕರ ಜೊತೆ ನಿಮ್ಮ ಜೊತೆ ನಾನು ಸದಾ ಇರುತ್ತೇನೆ, ಕಾರ್ಮಿಕರ ಅಭ್ಯುದಕ್ಕೆ ಮುಂದಿನ ದಿನಗಳಲ್ಲಿ ಆಧ್ಯತೆಯನ್ನು ನೀಡುತ್ತೇನೆ ಎಂದು ಶುಭ ಹಾರೈಸಿದರು.

ಈ ಸಮದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ರಾಜ್ಯ ಅಧ್ಯಕ್ಷ ಎನ್.ಕೆ ಪ್ರಕಾಶ್, ರಾಜ್ಯ ಕಾರ್ಯದರ್ಶಿ ವಿಶ್ವನಾಥ್, ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್.ಯು, ಬೆಳ್ತಂಗಡಿಯ ಜಯರಾಜ್, ಉದಯ ಬಿ.ಕೆ, ಮತ್ತು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!