ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ

ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ

ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ ಆದಿತ್ಯವಾರ ನಡೆಯಿತು.

ದಿವ್ಯ ಬಲಿಪೂಜೆಯಲ್ಲಿ ಯುವಜನರಿಗೋಸ್ಕರ ವಿಶೇಷವಾಗಿ ಪ್ರಾರ್ಥಿಸಲಾಯಿತು. ವಂ. ಧರ್ಮಗುರು ಫಾ.ಗ್ರೇಶನ್ ಅಲ್ವಾರಿಸ್ ಅವರು ಎಲ್ಲಾ ಯುವಜನರನ್ನು ಕುರಿತು ಮಾತನಾಡಿ ಈ ದಿನದ ಮಹತ್ವವನ್ನು ತಿಳಿಸಿ ಯುವ ಸಮುದಾಯವು ಸಂಘಟಿತವಾಗಿದ್ದರೆ ಧರ್ಮಕೇಂದ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದೆಂದು ಎಂಬ ಸಂದೇಶವನ್ನು ನೀಡಿದರು. ಹಾಗೂ ಮುಂದಿನ ದಿನಗಳಲ್ಲಿ ಮಾಡುವ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿ ಕಾರ್ಯಚಟುವಟಿಕೆಯ ಪಟ್ಟಿಯನ್ನು ತಯಾರಿಸಿದರು.

ಈ ಕಾರ್ಯಕ್ರಮಕ್ಕೆ ಐಸಿವೈಎಂ ಸಚೇತಕಿ ಸಿಸ್ಟರ್ ಸರಿತಾ ಡಿಸೋಜ ಹಾಗೂ ವೈ.ಸಿ.ಎಸ್ ಸಚೇತಕಿ, ಚರ್ಚ್ ಪಾಲನಾ ಸಮೀತಿಯ ಕಾರ್ಯದರ್ಶಿ ನಿಶ್ಮಿತಾ ಡಿಸೋಜ ಹಾಗೂ ಯುವ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!