ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾಗಿ ಉಷಾ ಅಂಚನ್, ಗಂಗಾಧರ ಶೆಟ್ಟಿ ಹೊಸಮನೆ ಆಯ್ಕೆ

ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾಗಿ ಉಷಾ ಅಂಚನ್, ಗಂಗಾಧರ ಶೆಟ್ಟಿ ಹೊಸಮನೆ ಆಯ್ಕೆ

ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು. ತಾಲೂಕು ಪಂಚಾಯಿತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ 16 ಜನ ನೂತನ ಸದಸ್ಯರ ಆಯ್ಕೆಗೊಳಿಸಿ ಸರ್ಕಾರ ಆದೇಶಿಸಿದೆ.

ಅಧ್ಯಕ್ಷರಾಗಿ ಸುಧೀರ್ ಕುಮಾರ್ ಶೆಟ್ಟಿ ಕಡಬ ಹಾಗೂ ಸದಸ್ಯರಾಗಿ ನೆಲ್ಯಾಡಿ ತಾಲೂಕು ಪಂಚಾಯಿತಿನ ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಸೇರಿದಂತೆ 16 ಮಂದಿ ನೂತನ ಸದಸ್ಯರುಗಳನ್ನು ಸರ್ಕಾರ ನೇಮಕಗೊಳಿಸಿದೆ.

ಗ್ಯಾರಂಟಿ ಅನುಷ್ಠಾನ ಸಮಿತಿಯ ಮೂಲಕ ಜನರ ಕುಂದು ಕೊರತೆಗಳನ್ನು ನಿವಾರಿಸಲು ಸರಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಅರ್ಹ ಪಲಾನುಭವಿಗಳಿಗೆ ದೊರಕಬೇಕೆನ್ನುವಂಥ ಉದ್ದೇಶದೊಂದಿಗೆ ಈ ಸಮಿತಿಯನ್ನು ರಚಿಸಲಾಗಿದೆ

Leave a Reply

You May Have Missed

error: Content is protected !!