ಬದಲಾಯ್ತು ಬೇಸಿಗೆ ರಜೆ: ಬೇಗನೇ ಶಾಲೆ ಆರಂಭಿಸಲು ಸರ್ಕಾರದ ನಿರ್ಧಾರ: ಆರಂಭ ಯಾವಾಗ?

ಬದಲಾಯ್ತು ಬೇಸಿಗೆ ರಜೆ: ಬೇಗನೇ ಶಾಲೆ ಆರಂಭಿಸಲು ಸರ್ಕಾರದ ನಿರ್ಧಾರ: ಆರಂಭ ಯಾವಾಗ?

ನೇಸರ ಫೆ.24: ಈ ಹಿಂದೆ ಶಾಲಾ ಶೈಕ್ಷಣಿಕ ವರ್ಷವು ಮೇ.29ರಿಂದ ಆರಂಭವಾಗಿ ಎಪ್ರಿಲ್ 10ಕ್ಕೆ ಮುಕ್ತಾಯವಾಗುತ್ತಿತ್ತು. ಆದರೆ ಈ ಬಾರಿ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬೇಗವೇ ಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮೇ.16ರಿಂದ 2022-23ರ ಶೈಕ್ಷಣಿಕ ವರ್ಷ ಆರಂಭವಾಗಲಿದೆ.
ಹೀಗಾಗಿ ಈ ಬಾರಿ ಎಪ್ರಿಲ್ 10ರಿಂದ ಮೇ.15ರವರೆಗೆ ಬೇಸಿಗೆ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ವರ್ಷ ಮೇ.16ರಿಂದ ಆರಂಭ ವಾಗಲಿದೆ.

ಸದ್ಭಾವನಾ ಸಮಾವೇಶ” ವೀಕ್ಷಿಸಿ Subscribers ಮಾಡಿ

ಕೋವಿಡ್ ಕಾರಣದಿಂದ ನಿರಂತರವಾಗಿ ಭೌತಿಕ ತರಗತಿಗಳು ನಡೆಯದೆ, ಆನ್ ಲೈನ್ ಶಿಕ್ಷಣ ಪರಿಣಾಮಕಾರಿಯಾಗಿಲ್ಲ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಈ ಕಲಿಕಾ ಹಿನ್ನಡೆಯನ್ನು ಸರಿದೂಗಿಸಲು ‘ಕಲಿಕಾ ಚೇತರಿಕಾ ಕಾರ್ಯಕ್ರಮ”ವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸ ಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

 

—ಜಾಹೀರಾತು—

Leave a Reply

You May Have Missed

error: Content is protected !!