ಕೊಕ್ಕಡ -ಗೊಳಿತೊಟ್ಟು ಭಾಗದಲ್ಲಿ ಬಿರುಗಾಳಿ – ಹಲವು ಮನೆಗಳು ಹಾಗೂ ಕೃಷಿಗೆ ಹಾನಿ

ಕೊಕ್ಕಡ -ಗೊಳಿತೊಟ್ಟು ಭಾಗದಲ್ಲಿ ಬಿರುಗಾಳಿ – ಹಲವು ಮನೆಗಳು ಹಾಗೂ ಕೃಷಿಗೆ ಹಾನಿ

ಕೊಕ್ಕಡ: ನೆಲ್ಯಾಡಿ ಸಮೀಪದ ಗೊಳಿತೊಟ್ಟು ಭಾಗದ ಕೊಡಿಂಗೇರಿ ಹಾಗೂ ಕೊಕ್ಕಡ ಗ್ರಾಮದ ಹಾರ, ಮಡೆಜೋಡಿ, ಪಿಜಿನಡ್ಕ ಮೊದಲಾದ ಕಡೆಗಳಲ್ಲಿ ಭಾನುವಾರ ಬೆಳಗ್ಗೆ ಬೀಸಿದ ಬಿರುಗಾಳಿಗೆ ಹಲವು ಮನೆಗಳು ಹಾಗೂ ಕೃಷಿಗಳು ಹಾನಿಗೊಂಡ ಘಟನೆ ನಡೆದಿದೆ.

ಮಡೆಜೋಡಿ ಸಮೀಪದ ಲಿಯೋ ಡಿಸೋಜಾ, ಜಬ್ಬಾರ್ ಹಾಗೂ ಅವರ ಪಕ್ಕದ ಕೃಷಿ ತೋಟಗಳಲ್ಲಿ ನೂರಕ್ಕೂ ಅಧಿಕ ಅಡಿಕೆ ಮರಗಳು, ಕೊಕ್ಕಡ ಭಾಗದ ಕೊಡಿಂಗೇರಿಯ ಅಣ್ಣುಗೌಡ, ಶಶಿ, ಕೊಕ್ಕಡ ಗ್ರಾ.ಪಂ ಸದಸ್ಯೆ ಲತಾ, ಹಾರ ಬಾಲಪ್ಪ ಗೌಡ ಅವರಿಗೆ ಸೇರಿದ ಅಡಿಕೆ ಮರಗಳು. ಪಿಜಿನಡ್ಕ ಕಾಲೋನಿ ನಿವಾಸಿ ಬಾಬಿ ಹಾಗೂ ಅವರ ಸಮೀಪದ ಕೆಲವು ಮನೆಗಳ ಮೇಲ್ಚಾವಣಿ ಬಿರುಗಾಳಿಗೆ ಹಾರಿ ಹಾನಿಗೊಂಡು ಅಪಾರ ನಷ್ಟ ಸಂಭವಿಸಿದೆ.

ಕೊಕ್ಕಡ ಕಂದಾಯ ಇಲಾಖೆ ಹಾಗೂ ಕೊಕ್ಕಡ ಪಂಚಾಯಿತಿನ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

You May Have Missed

error: Content is protected !!