ಇಚ್ಲಂಪಾಡಿ: ಇನ್ನೋವಾ-ಕಾರು ಡಿಕ್ಕಿ, ಇಬ್ಬರಿಗೆ ಗಾಯ

ಇಚ್ಲಂಪಾಡಿ: ಇನ್ನೋವಾ-ಕಾರು ಡಿಕ್ಕಿ, ಇಬ್ಬರಿಗೆ ಗಾಯ

ನೆಲ್ಯಾಡಿ:ಇನ್ನೋವಾ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯ ಇಚ್ಲಂಪಾಡಿ ಗ್ರಾಮದ ಅಲಂಗ ಎಂಬಲ್ಲಿ ಆ.25ರಂದು ಸಂಭವಿಸಿದೆ.

ಬೆಂಗಳೂರು ಮೈಲಸಂದ್ರ ನಿವಾಸಿ ಶಿವಕುಮಾರ್ ಎಂಬವರು ಅವರ ಇನ್ನೋವಾ ಕಾರು ನಲ್ಲಿ ಬೆಂಗಳೂರಿನಿಂದ ಕುಟುಂಬ ಹಾಗೂ ನೆರೆಕರೆಯ ಶಿವಕುಮಾರ್, ರೀತು, ಪೂರ್ವಿ ಮತ್ತು ಇಬ್ಬರು ಮಕ್ಕಳೊಂದಿಗೆ ಆ.24ರಂದು ಧರ್ಮಸ್ಥಳಕ್ಕೆ ಬಂದವರು ಮರುದಿನ ಆ.25ರಂದು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದ ವೇಳೆ ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಅಲಂಗ ಎಂಬಲ್ಲಿಗೆ ತಲುಪಿದಾಗ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಎರಡು ವಾಹನಗಳು ಜಖಂಗೊಂಡಿದ್ದು ಇನ್ನೋವಾ ಕಾರಿನಲ್ಲಿದ್ದ ಶಿವಕುಮಾರ್ ಹಾಗೂ ಇನ್ನೊಂದು ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಇನ್ನೋವಾ ಕಾರು ಚಾಲಕ ಶಿವಕುಮಾರ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!