ಶಾಲಾ ಕಟ್ಟಡ ಕಾಮಗಾರಿ ವೇಳೆ ಕುಸಿತ; ನಾಲ್ಕು ಮಕ್ಕಳಿಗೆ ಗಾಯ

ಶಾಲಾ ಕಟ್ಟಡ ಕಾಮಗಾರಿ ವೇಳೆ ಕುಸಿತ; ನಾಲ್ಕು ಮಕ್ಕಳಿಗೆ ಗಾಯ

ಕಡಬ ತಾಲೂಕಿನ ಕುಂತೂರು ಶಾಲೆಯಲ್ಲಿ ಕಾಮಗಾರಿ ವೇಳೆ ಶಾಲಾ ಕಟ್ಟಡ ಕುಸಿತಗೊಂಡ ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಆ.27ರಂದು ಮಧ್ಯಾಹ್ನದ ವೇಳೆಗೆ ನಡೆದಿದೆ.

ನಾದುರಸ್ತಿಯಲ್ಲಿದ್ದ ಶಾಲಾ ಕಟ್ಟಡದ ಪಕ್ಕದಲ್ಲೇ ಹಳೆಯ ಕಟ್ಟಡದ ಪಕ್ಕದಲ್ಲಿ ಜೆಸಿಬಿ ಮೂಲಕ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಹಳೆಯ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಇದರಿಂದಾಗಿ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

ಈ ವೇಳೆ ಹೆಚ್ಚಿನ ಮಕ್ಕಳು ಆಟದ ಮೈದಾನಕ್ಕೆ ತೆರಳಿರುವುದರಿಂದ ಹೆಚ್ಚಿನ ಅನಾಹುತ ನಡೆದಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Leave a Reply

You May Have Missed

error: Content is protected !!