ನೆಲ್ಯಾಡಿ ವಿ.ವಿ ಕಾಲೇಜುನಲ್ಲಿ ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮ

ನೆಲ್ಯಾಡಿ ವಿ.ವಿ ಕಾಲೇಜುನಲ್ಲಿ ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮ

ನೆಲ್ಯಾಡಿ ವಿ.ವಿ ಕಾಲೇಜುನಲ್ಲಿ ಮಂಗಳೂರು ಜಿಲ್ಲಾ ಉದ್ಯೋಗ ವಿನಿಮಯ ಸಂಸ್ಥೆಯ ಕೌನ್ಸಿಲರ್ ಮಂಜೂಷ ಅವರು ಕಾಲೇಜಿನ ವಿದ್ಯಾರ್ಥಿಗಳಿಗೆ ‘ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮದಡಿ ಗುರುವಾರದಂದು ತರಬೇತು ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ನೋಂದಣಿ ಮಾಡಿಸುವುದರ ಮೂಲಕ ಉದ್ಯೋಗ ಕಾರ್ಡ್ ನೀಡಿ ವಿದ್ಯಾರ್ಥಿಗಳಿಗೆ ಅದರ ಉಪಯುಕ್ತತೆ ಹಾಗೂ ಬಳಸುವಿಕೆಯ ಕುರಿತಂತೆ ಮಾಹಿತಿ ನೀಡಿದರು. ಇದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು, ಸಂದರ್ಶನ ಎದುರಿಸುವುದರ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡುವುದರೊಂದಿಗೆ ಮಾಹಿತಿ ನೀಡಿದರು.

ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಸೀತಾರಾಮ.ಪಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಪಾವನ ರೈ ವಂದಿಸಿದರು. ವಿದ್ಯಾರ್ಥಿಗಳು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!