ಕಾರ್ಗಿಲ್ ಕದನದ 25ವರ್ಷದ ನೆನಪಿಗಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮ

ಅರಸಿನಮಕ್ಕಿ: ಕಾರ್ಗಿಲ್ ಕದನದ 25ವರ್ಷದ ನೆನಪಿಗಾಗಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮವನ್ನು ಅರಸಿನಮಕ್ಕಿ -ಶಿಶಿಲ ಶೌರ್ಯ ವಿಪತ್ತು ಘಟಕ ಮತ್ತು ಅರಸಿನಮಕ್ಕಿ ಪ್ರೌಢಶಾಲಾ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಗಿಲ್ ಹೋರಾಟದಲ್ಲಿ ತೊಡಗಿಸಿಕೊಂಡ ಶಿಬಾಜೆ ಗ್ರಾಮದ ಪ್ರಸನ್ನ ಬರ್ಗುಳ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಕ್ಕಳೊಂದಿಗೆ ಸಂವಾದ ನಡೆಸಿ ಸೈನಿಕನಾಗ ಬಯಸುವ ಯುವ ಶಕ್ತಿಗೆ ಪ್ರೇರಣೆಯ ಮಾತುಗಳನ್ನಾಡಿದರು. ಹಾಗೆಯೇ ತಾನು ಕಾರ್ಗಿಲ್ ಹೋರಾಟದಲ್ಲಿ ತೊಡಗಿಸಿಕೊಂಡ ಪರಿಯನ್ನು ಮಕ್ಕಳಿಗೆ ತಿಳಿಸಿದರು. ಕಾರ್ಗಿಲ್ ವನ ನಿರ್ಮಿಸಿ ಮೆಚ್ಚುಗೆಗಳಿಸಿದ್ದ ಸಚಿನ್ ಭಿಡೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕ ಚಂದ್ರು, ಶಿಬಾಜೆ ಪಂಚಾಯಿತಿ ಉಪಾಧ್ಯಕ್ಷ ದಿನಕರ್ ಕುರುಪ್, ರತ್ನಮ್ಮ, ವಲಯ ಮೇಲ್ವಿಚಾರಕಿ ಶಶಿಕಲಾ, ಶೌರ್ಯ ವಿಪತ್ತು ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅವಿನಾಶ್ ಬಿಡೆ ಸನ್ಮಾನಿತರ ಪರಿಚಯ ಮತ್ತು ಪ್ರಾಸ್ತಾವಿಕ ನುಡಿಗಳನ್ನು ನೆರವೇರಿಸಿದರು. ಚಂದ್ರು ಸ್ವಾಗತಿಸಿದರು. ಮಂಜುಳ ನಿರೂಪಿಸಿದರು. ಚೇತನಾಕ್ಷಿ ವಂದಿಸಿದರು.



















Leave a Reply