ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

ಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ

ಮೂಡುಬಿದಿರೆ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಪ್ರಾಂತ್ಯ ಗ್ರಾಮದ ಟೈಲರ್‌ ಅಂಗಡಿಯೊಂದಕ್ಕೆ ಹೋಗುತ್ತಿರುವಾಗ ತನ್ನ ಕ್ಲಾಸ್‌ಮೇಟ್‌ ಆಗಿದ್ದ ಅರ್ಷದ್‌ (21) ತನ್ನನ್ನು ಅಡ್ಡಗಟ್ಟಿ ನೀನು ನನ್ನನ್ನು ಯಾಕೆ ಪ್ರೀತಿಸುತ್ತಿಲ್ಲ ಎಂದನಲ್ಲದೆ ತನ್ನ ಮೈ ಮೇಲೆ ಕೈ ಹಾಕಲು ಬಂದ ಎಂದು ಕೋಟೆಬಾಗಿಲಿನ ಯುವತಿ (19) ಆಪಾದಿಸಿ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ನಡೆದಾಗ ತಾನು ಬೊಬ್ಬೆಹೊಡೆದ ಕೂಡಲೇ ಟೈಲರ್‌ ಹೊರಬಂದಾಗ ಆರೋಪಿ ಸ್ಥಳದಿಂದ ಓಡಿಹೋದನೆಂದೂ ದೂರಿನಲ್ಲಿ ತಿಳಿಸಲಾಗಿದೆ.

ಮಹಿಳೆಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಪ್ರಕರಣದನ್ವಯ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.

ಮೂಲತಃ ಇರುವೈಲಿನವನಾದ ಅರ್ಷದ್‌ ಮೂಡುಬಿದಿರೆ ಕೊಡಂಗಲ್ಲು ಪಿಲಿಪಂಜರ ಎಂಬಲ್ಲಿದ್ದು, ಬಳಿಕ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿರುವುದಾಗಿ ತಿಳಿದುಬಂದಿದೆ. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲವು ಸಮಯದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದು, ಗುರುವಾರ ಬಟ್ಟೆ ಹೊಲಿಸಲೆಂದು ಟೈಲರ್‌ ಅಂಗಡಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

Leave a Reply

You May Have Missed

error: Content is protected !!