ನೆಲ್ಯಾಡಿ-ಪುತ್ತೂರು ಬೆಳಗ್ಗಿನ ಬಸ್ ಓಡಾಟ ಪುನರಾರಂಭಿಸುವಂತೆ ಪುತ್ತೂರು ಶಾಸಕರ ಮೊರೆ ಹೋದ ನೆಲ್ಯಾಡಿ ಭಾಗದ ವಿದ್ಯಾರ್ಥಿಗಳು

ನೆಲ್ಯಾಡಿ-ಪುತ್ತೂರು ಬೆಳಗ್ಗಿನ ಬಸ್ ಓಡಾಟ ಪುನರಾರಂಭಿಸುವಂತೆ ಪುತ್ತೂರು ಶಾಸಕರ ಮೊರೆ ಹೋದ ನೆಲ್ಯಾಡಿ ಭಾಗದ ವಿದ್ಯಾರ್ಥಿಗಳು

ನೆಲ್ಯಾಡಿ: ನೆಲ್ಯಾಡಿಯಿಂದ ಪುತ್ತೂರಿಗೆ ಬೆಳಗ್ಗೆ 7.15ಕ್ಕೆ ಸಂಚಾರ ಮಾಡುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟ ಪುನರಾರಂಭಿಸುವಂತೆ ಪುತ್ತೂರು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯಕ್ಕೆ ಬರುತ್ತಿರುವ ನೆಲ್ಯಾಡಿ ಭಾಗದ ವಿದ್ಯಾರ್ಥಿಗಳು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ನೀಡಿದರು

ಈ ಹಿಂದೆ 7.15ಕ್ಕೆ ನೆಲ್ಯಾಡಿಯಿಂದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟ ಇತ್ತು. ಆದರೆ ಈ ಬಸ್ಸು ಕೋವಿಡ್ ವೇಳೆ ಸ್ಥಗಿತಗೊಂಡಿದ್ದು ಬಳಿಕ ಓಡಾಟ ಪುನರಾರಂಭಗೊಂಡಿಲ್ಲ. ಈಗ ಬೆಳಗ್ಗೆ 8.15ಕ್ಕೆ ನೆಲ್ಯಾಡಿಯಿಂದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್ಸು ಇದ್ದು, ಇದು ಪುತ್ತೂರಿಗೆ ತಲುಪುವಾಗ 9.30 ಆಗುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ವಿದ್ಯಾಲಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ನೆಲ್ಯಾಡಿಯಿಂದ 7.15ಕ್ಕೆ ಪುತ್ತೂರಿಗೆ ಹೊರಡುವ ಬಸ್ಸು ಇದ್ದಲ್ಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾಲಯಕ್ಕೆ ಹಾಜರಾಗಲು ಅನುಕೂಲವಾಗುತ್ತದೆ. ನೆಲ್ಯಾಡಿಯಿಂದ ಸುಮಾರು 30ರಿಂದ 40ವಿದ್ಯಾರ್ಥಿಗಳು ಪುತ್ತೂರಿನ ಬೇರೆ ಬೇರೆ ವಿದ್ಯಾಸಂಸ್ಥೆಗಳಿಗೆ ಬರುತ್ತಿದ್ದಾರೆ. ಇವರೆಲ್ಲರಿಗೂ ಅನುಕೂಲವಾಗುವಂತೆ ಬೆಳಿಗ್ಗೆ 7.15ಕ್ಕೆ ನೆಲ್ಯಾಡಿಯಿಂದ ಕೆಎಸ್‌ಆರ್‌ಟಿಸಿ ಬಸ್ಸು ಓಡಾಟಕ್ಕೆ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಶಾಸಕರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಶಾಸಕರು, ಶೀಘ್ರದಲ್ಲಿ ಚಾಲಕ ಮತ್ತು ನಿರ್ವಾಹಕರ ಆಯ್ಕೆ ನಡೆಯಲಿದೆ. ಆಯ್ಕೆಯಾದ ಕೂಡಲೇ ಬಸ್ಸಿನ ವ್ಯವಸ್ಥೆ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

Leave a Reply

You May Have Missed

error: Content is protected !!