ನೆಲ್ಯಾಡಿ ಶಾಸ್ತಾರ ಫ್ರೆಂಡ್ಸ್ ನಿರ್ಮಾಣದ ದೇಶಭಿಮಾನ ಮೂಡಿಸುವ ಸ್ಥಬ್ದ ಚಿತ್ರಕ್ಕೆ ಬಾರಿ ಮನ್ನಣೆ

ನೆಲ್ಯಾಡಿ ಶಾಸ್ತಾರ ಫ್ರೆಂಡ್ಸ್ ನಿರ್ಮಾಣದ ದೇಶಭಿಮಾನ ಮೂಡಿಸುವ ಸ್ಥಬ್ದ ಚಿತ್ರಕ್ಕೆ ಬಾರಿ ಮನ್ನಣೆ

ನೆಲ್ಯಾಡಿ ನಡೆದ 42ನೇ ವರ್ಷ ದ ಶ್ರೀ ಸಾರ್ವಜನಿಕ ಗಣೇಶೋತ್ಸವದ ವೈಭವದ ಶೋಭಾ ಯಾತ್ರೆಯಲ್ಲಿ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ಅವರು ನಿರ್ಮಾಣ ಮಾಡಿರುವ ಶಬ್ದ ಚಿತ್ರ ಎಲ್ಲರ ಗಮನ ಸೆಳೆಯಿತು

ಅನೇಕ ಸ್ತಬ್ದ ಚಿತ್ರಗಳು ಮೆರವಣಿಗೆಗೆ ರಂಗು ನೀಡಿದ್ದು, ಅದರಲ್ಲೂ ಶಾಸ್ತಾರ ಫ್ರೆಂಡ್ಸ್ ಕುತ್ರಾಡಿ ಹಾರ್ಪಳ ನೆಲ್ಯಾಡಿ ಸಂಘದ ಸದಸ್ಯರು ತಾವೇ ನಿರ್ಮಾಣಮಾಡಿದ್ದ, “ಕಾರ್ಗಿಲ್ 25 ನೇ ವಿಜಯೋತ್ಸೋವದ ನೆನಪಿಗಾಗಿ ” ಪ್ರಸ್ತುತ ಪಡಿಸಿದ ಸ್ತಬ್ದ ಚಿತ್ರವು ಮಿಲಿಟರಿ ಸಾಧನ ಗಳ ಬಗ್ಗೆ ಸಂಪೂರ್ಣ ಅರಿವು ಇಲ್ಲದವರಿಗೆ ಅದೊಂದು ಮಾದರಿ ಚಿತ್ರವಾಗಿ ಬಿಂಬಿತವಾಗಿದ್ದು, ಇನ್ನೂ ಅನೇಕ ದೇಶಭಕ್ತರಿಗೆ ದೇಶಾಭಿಮಾನ ಮೂಡಿಸುವ ಸ್ಫೂರ್ತಿಯ ಸ್ತಬ್ದ ಚಿತ್ರವಾಯಿತು, ಈ ನಿಟ್ಟಿನಲ್ಲಿ ಶಾಸ್ತಾರ ಪ್ರೆಂಡ್ಸ್ ಕುತ್ರಾಡಿ ಹಾರ್ಪಳ ಸಂಘಟನೆಯು ತಾವೇ ತಯಾರಿಸಿದ ಸ್ತಬ್ದ ಚಿತ್ರ ಸಾವಿರಾರು ನೋಡುಗರ ಕನ್ಸೆಳೆಯಿತು

ಕಾರ್ಗಿಲ್ ಕದನದಲ್ಲಿ ಪಾಕಿಸ್ತಾನವನ್ನು ಹೀನಾಯಾವಾಗಿ ಸೋಲಿಸಲು ಬೂಫೋರ್ಸ್ ಪಿರಂಗಿಗಳು ಪ್ರಮುಖ ಪಾತ್ರ ವಹಿಸಿದ್ದವು, ಅದೇ ಬೋಫೋರ್ಸ್ ಪಿರಂಗಿಗಳು ಇಂದು ಆರ್ಟಿಲರಿ ಗನ್ ಗಳಂತೆ ಬದಲಾಗಿದೆ,ಇಂದು ದೇಶದ ಸೈನ್ಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ.ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆರ್ಟಿಲರಿ ಗನ್ ಹೋಲುವ ಸ್ತಬ್ದ ಚಿತ್ರವನ್ನ ಶಾಸ್ತಾರ ಫ್ರೆಂಡ್ಸ್ ಸದಸ್ಯರು ತಯಾರಿಸಿದ್ದು ಭಾರೀ ಜನಮಣ್ಣನೆಗೆ ಪಾತ್ರವಾಗಿದೆ.

ಶಾಸ್ತಾರ ಫ್ರೆಂಡ್ಸ್ ಪ್ರಸ್ತುತ ಪಡಿಸಿದ ಆರ್ಟಿಲರಿ ಗನ್ ಈ ಸ್ತಬ್ದ ಚಿತ್ರಕ್ಕೆ ಸಂಘದ ಸದಸ್ಯರು ನಿವೃತ್ತ ಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಸಂಘದ ಸದಸ್ಯರು ಹಗಲಿರುಳು ತಾವೇ ಕೆಲಸ ಮಾಡಿ ಈ ಗನ್ ನ ರಚನೆ ಮಾಡಿರುತ್ತಾರೆ.

ತಮ್ಮ ಯಾವುದಾದರು ಕಾರ್ಯಕ್ರಮಗಳಿಗೆ ಈ ಸ್ತಬ್ದ ಚಿತ್ರ ಬೇಕಿದ್ದಲ್ಲಿ ಈ ನಂಬರ್ ಗೆ ಸಂಪರ್ಕಿಸಿ
8971500130
99643 72198

Leave a Reply

You May Have Missed

error: Content is protected !!