ಶಿರಾಡಿ ಘಾಟಿ: ಈಚರ್ ಲಾರಿ ಬೆಂಕಿಗಾಹುತಿ

ಶಿರಾಡಿ ಘಾಟಿ: ಈಚರ್ ಲಾರಿ ಬೆಂಕಿಗಾಹುತಿ

ನೆಲ್ಯಾಡಿ: ಈಚರ್ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಡಬಲ್‌ಟರ್ನ್ ಬಳಿ ಸೆ.11ರಂದು ಬೆಳಿಗ್ಗೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಈಚರ್ ಲಾರಿಯಲ್ಲಿ ಶಿರಾಡಿ ಘಾಟಿಯ ಡಬಲ್‌ಟರ್ನ್ ಬಳಿ ತಲುಪುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದ್ದು ಚಾಲಕ ಲಾರಿಯನ್ನು ಹೆದ್ದಾರಿ ಬದಿ ನಿಲ್ಲಿಸಿ ಕೆಳಕ್ಕಿಳಿದಿದ್ದಾರೆ. ಬಳಿಕ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟುಹೋಗಿದೆ ಎಂದು ವರದಿಯಾಗಿದೆ.

Leave a Reply

You May Have Missed

error: Content is protected !!