ನೆಲ್ಯಾಡಿ ಸೂರ್ಯನಗರ ಶ್ರೀರಾಮ ಶಾಲೆಯ ಮನೀಶ್.ಬಿ ಶೆಟ್ಟಿ, ಅಖಿಲ್.ಎನ್.ಎಸ್ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ

ನೆಲ್ಯಾಡಿ ಸೂರ್ಯನಗರ ಶ್ರೀರಾಮ ಶಾಲೆಯ ಮನೀಶ್.ಬಿ ಶೆಟ್ಟಿ, ಅಖಿಲ್.ಎನ್.ಎಸ್ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ

ನೆಲ್ಯಾಡಿ: ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ ವತಿಯಿಂದ ಮೂರು ರಾಜ್ಯವನ್ನು ಒಳಗೊಂಡು ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ನೆಲ್ಯಾಡಿ ಸೂರ್ಯ ನಗರ ಶ್ರೀರಾಮ ಶಾಲೆಯ ಮನೀಶ್.ಬಿ ಶೆಟ್ಟಿ ತ್ರಿಬಲ್ ಜಂಪುನಲ್ಲಿ ಪ್ರಥಮ, ಲಾಂಗ್ ಜಂಪುನಲ್ಲಿ ದ್ವಿತೀಯ ಸ್ಥಾನ ಪಡೆದು ಬಂಗಾರ ಹಾಗೂ ಬೆಳ್ಳಿ ಪದಕ ಹಾಗೂ ಬಾಲವರ್ಗ ವಿಭಾಗದಲ್ಲಿ ಅಖಿಲ್.ಎನ್.ಎಸ್ ಉದ್ದ ಜಿಗಿತ ಸ್ಪರ್ಧೆಯಲ್ಲಿ ಬಂಗಾರದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಇವರು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುತ್ತಾರೆ.

Leave a Reply

You May Have Missed

error: Content is protected !!