ಗಂಭೀರ ಗಾಯಗೊಂಡಿದ್ದ ಬೈಕ್ ಸಹಸವಾರೆ ಸಾವು

ಗಂಭೀರ ಗಾಯಗೊಂಡಿದ್ದ ಬೈಕ್ ಸಹಸವಾರೆ ಸಾವು

ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೆ.10ರಂದು ಮಂಗಳವಾರ ರಾತ್ರಿ ನಡೆದಿದ್ದ ರಸ್ತೆ ಅಪಘಾತದಲ್ಲಿಗಾಯಗೊಂಡಿದ್ದ ‌ಮಹಿಳೆ ಮೃತಪಟ್ಟಿದ್ದಾರೆ.

ಸಾಲೆತ್ತೂರಿನಲ್ಲಿರುವ ಪ್ರಸಿದ್ಧ ವೈದ್ಯರ ಬಳಿ ಪುತ್ತೂರಿನಿಂದ ಸಂಬಂಧಿಕನ ಜೊತೆ ಆಕ್ಟಿವಾದಲ್ಲಿ ಬರುತ್ತಿದ್ದ ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಧರ್ಮಪಾಲ ಗೌಡ ಅವರ ಪತ್ನಿ ಸುಂದರಿ(48) ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಜ್ಞಾಹೀನರಾಗಿದ್ದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐದು ದಿನ ಐಸಿಯುನಲ್ಲಿದ್ದ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಸೆ.16ರ ಸೋಮವಾರ ನಿಧನರಾಗಿದ್ದಾರೆ.

Leave a Reply

You May Have Missed

error: Content is protected !!