ನೇಲ್ಯಡ್ಕ ಶಾಲೆಯಲ್ಲಿ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ತಂಡದಿಂದ ಶ್ರಮದಾನ

ನೇಲ್ಯಡ್ಕ ಶಾಲೆಯಲ್ಲಿ ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ತಂಡದಿಂದ ಶ್ರಮದಾನ

ಕೊಕ್ಕಡ: ಅರಸಿನಮಕ್ಕಿ ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸೆಪ್ಟೆಂಬರ್ ತಿಂಗಳ ಮಾಸಿಕ ಶ್ರಮದಾನ ರೆಖ್ಯದ ನೇಲ್ಯಡ್ಕ ಶಾಲೆಯಲ್ಲಿ ನಡೆಯಿತು.

ಶಾಲೆಯಲ್ಲಿ ಪೌಷ್ಟಿಕ ತೋಟ ನಿರ್ಮಾಣ, ತರಕಾರಿ ಬಳ್ಳಿಗಳಿಗೆ ಚಪ್ಪರ, ತೆಂಗು, ಬಾಳೆ ಗಿಡಗಳ ನಾಟಿ ಹಾಗೂ ಬುಡಗಳಿಗೆ ಸೊಪ್ಪು ಹಾಕಲಾಯಿತು.

ಅರಸಿನಮಕ್ಕಿ ವಲಯ ಮೇಲ್ವಿಚಾರಕ ಶಶಿಕಲಾ ಅವರ ಮಾರ್ಗದರ್ಶನದಲ್ಲಿ ನಡೆದ ಶ್ರಮದಾನದಲ್ಲಿ ಸಂಯೋಜಕಿ ರಶ್ಮಿತಾ ಸೇರಿದಂತೆ 13 ಜನ ಸ್ವಯಂಸೇವಕರು ಭಾಗವಹಿಸಿದ್ದರು.

ಶಾಲಾ ಮುಖ್ಯಶಿಕ್ಷಕಿ ವಸಂತಿ, ಶಿಕ್ಷಕ ಶ್ರೀಧರ್ ಮತ್ತು ಸಹ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಭವಾನಿ ಉಪಸ್ಥಿತರಿದ್ದು ಶ್ರಮದಾನದಲ್ಲಿ ಪಾಲ್ಗೊಂಡ‌ ಸ್ವಯಂಸೇವಕರಿಗೆ ಧನ್ಯವಾದ ತಿಳಿಸಿದರು.

Leave a Reply

You May Have Missed

error: Content is protected !!