ಶ್ರಮದಾನದ ಮೂಲಕ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿದ ಕೊಕ್ಕಡದ ಆಟೋ ಚಾಲಕರು

ಶ್ರಮದಾನದ ಮೂಲಕ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿದ ಕೊಕ್ಕಡದ ಆಟೋ ಚಾಲಕರು

ಕೊಕ್ಕಡ: ಕೊಕ್ಕಡ ದಿಂದ ಹಳ್ಳಿಂಗೇರಿಗೆ ಹೋಗುವ ರಸ್ತೆ ಹೊಂಡಗಳಿಂದ‌ ತುಂಬಿ‌‌ ಸಂಚಾರಕ್ಕೆ ‌ಅನಾನುಕೂಲವಾಗುವುದನ್ನ‌ ಮನಗಂಡ‌ ಕೊಕ್ಕಡ‌ದ 6 ಅಟೋಚಾಲಕ ಸ್ನೇಹಿತರು ಕೆಂಪು ಕಲ್ಲುಗಳನ್ನು ‌ಹಾಕಿ ಹೊಂಡ ಮುಚ್ಚು ಮೂಲಕ ಸಾಮಾಜಿಕ ಕಳಕಳಿಯನ್ನು ಮಾಡಿದ್ದಾರೆ.

ಸತೀಶ್ ಬದಿಯಡ್ಕ ಅವರು ಕೆಲಸಕ್ಕೆ ಪಿಕ್ ಅಫ್ ‌ವಾಹನವನ್ನು‌ ನೀಡಿ ಸಹಕಾರ ‌ನೀಡಿದರು. ಅಟೋಚಾಲಕರಾದ ಸಂದೀಪ್, ಉಮೇಶ್, ಚಿನ್ ಟಿ.ಎಲ್, ಪ್ರಮೋದ್ ಬದಿಯಡ್ಕ, ಚಂದ್ರ, ‌ಜೀತೇಶ್ ಕೃಷ್ಣ ಅವರು ಶ್ರಮದಾನದ ಮೂಲಕ‌ ರಸ್ತೆಯಲ್ಲಿ ಇದ್ದ ಹೊಂಡಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

Leave a Reply

You May Have Missed

error: Content is protected !!