ನೆಲ್ಯಾಡಿ: ಹೊಸಮಜಲು-ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗದ ನೂತನ ಸಮಿತಿ ರಚನೆ

ನೆಲ್ಯಾಡಿ: ಹೊಸಮಜಲು-ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗದ ನೂತನ ಸಮಿತಿ ರಚನೆ

ನೆಲ್ಯಾಡಿ ಹೊಸಮಜಲು-ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗ ಇದರ ವಾರ್ಷಿಕ ಮಹಾಸಭೆಯು ಆದಿತ್ಯವಾರ ಹೊಸಮಜಲಿನ ಬಿರ್ವ ಆಡಿಟೋರಿಯಮ್ ನಲ್ಲಿ ನಡೆಯಿತು.

2024ರ ಕಂಡಡ್ ಒಂಜಿ ದಿನ ಕಾರ್ಯಕ್ರಮದ ಹಾಗೂ ಗಣೇಶ ಚತುರ್ಥಿಯ ಲೆಕ್ಕಾಚಾರ ಮಂಡನೆ ನಡೆಯಿತು, ಬಳಿಕ 2024-25ರ ಸಾಲಿನ ಅಶ್ವತ್ಥ ಗೆಳೆಯರ ಬಳಗದ ನೂತನ ಸಮಿತಿ ರಚನೆಯಾಯಿತು.

ಅಧ್ಯಕ್ಷರಾಗಿ ವಂದನ್ ಕುಮಾರ್, ಕಾರ್ಯದರ್ಶಿಯಾಗಿ ಶ್ರವಣ್ ಕುಮಾರ್, ಉಪಾಧ್ಯಕ್ಷರಾಗಿ ರೋಹಿತ್ ಮಂಚಿ, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಪಾದೆ, ಕೋಶಾಧಿಕಾರಿ ಯಾಗಿ ಪ್ರಭಾಕರ ಅಣ್ಣುಗುಂಡಿ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಮುಂದಿನ ಕಾರ್ಯಕ್ರಮಗಳ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಗೆಳೆಯರ ಬಳಗದ ಸದಸ್ಯರು ಹಾಜರಿದ್ದು ಸಲಹೆ ಸೂಚನೆ ನೀಡಿ ಸಹಕರಿಸಿದರು.

Leave a Reply

You May Have Missed

error: Content is protected !!