ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ರಚನೆ

ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಟ್ರಸ್ಟ್ ರಚನೆ

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ 2017ರಲ್ಲಿ ಆರಂಭಗೊಂಡ ಕ್ರಿಶ್ಚಿಯನ್ ಬ್ರದರ್ಸ್ ಸಂಸ್ಥೆಯನ್ನು ಸೆ.24ರಂದು ಕ್ರಿಶ್ಚಿಯನ್ ಆಕ್ಟ್ ಪ್ರಕಾರ ನೋಂದಾವಣೆ ಮಾಡಲಾಗಿದ್ದು ಇದರ ಪ್ರಥಮ ಅಧ್ಯಕ್ಷರಾಗಿ ಜಾನ್ಸನ್ ಕೆ.ಜೆ., ಉಪಾಧ್ಯಕ್ಷರಾಗಿ ಬಿಬಿನ್, ಕಾರ್ಯದರ್ಶಿಯಾಗಿ ನಿತಿನ್, ಖಜಾಂಜಿ ಜೋಸೆಫ್ ಆಯ್ಕೆಗೊಂಡಿದ್ದಾರೆ. ಸದಸ್ಯರಾಗಿ ತೋಮಸ್ ಜಿ., ಅಲೆಕ್ಸ್ ವರ್ಗೀಸ್, ಎಂ.ಎಂ.ವರ್ಗೀಸ್, ರೋಬಿನ್, ಡೇವಿಡ್ ಎಮ್.ಪಿ., ಅಶ್ವಿನ್ ಜೋಸೆಫ್, ಮೆಹಿ ಜಾರ್ಜ್ ಹಾಗೂ ಗೌರವ ಸಲಹೆಗಾರರಾಗಿ ತಂಗಚ್ಚನ್, ವರ್ಗೀಸ್ ಅಬ್ರಹಾಂ ಆಯ್ಕೆಗೊಂಡಿದ್ದಾರೆ.

ಮೆಹಿಜಾರ್ಜ್ ಹಾಗೂ ದಿ.ಬೋಬಿ ವಿ.ಎಸ್. ಅವರಿಂದ ಸ್ಥಾಪಿತವಾದ ಕ್ರಿಶ್ಚಿಯನ್ ಬ್ರದರ್ಸ್ ಸಮಾಜ ಸೇವೆಯೊಂದಿಗೆ ಕ್ರಿಶ್ಚಿಯನ್ ಬಾಂಧವರ ಏಳಿಗೆಗಾಗಿ ದುಡಿಯುತ್ತಿದ್ದು ಜನರ ಮೆಚ್ಚುಗೆ ಪಡೆದುಕೊಂಡಿದೆ. ಸಮಾಜದ ಏಳಿಗೆಗಾಗಿ ಹಲವು ಯುವಕರನ್ನು ಸೇರಿಸಿಕೊಂಡು ದುಡಿಯುವ ಉದ್ದೇಶದೊಂದಿಗೆ ಕ್ರಿಶ್ಚಿಯನ್ ಆಕ್ಟ್ ಪ್ರಕಾರ ಇದೀಗ ಸಂಘವನ್ನು ನೋಂದಾವಣೆ ಮಾಡಲಾಗಿದೆ ಎಂದು ನೂತನ ಅಧ್ಯಕ್ಷ ಜಾನ್ಸನ್ ಕೆ.ಜೆ.ತಿಳಿಸಿದ್ದಾರೆ.

Leave a Reply

You May Have Missed

error: Content is protected !!