ಕೊಕ್ಕಡ ಹಿಂದೂ ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಘಟಕ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ಕೊಕ್ಕಡ ಹಿಂದೂ ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಘಟಕ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ಕೊಕ್ಕಡ: ಹಿಂದೂ ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಘಟಕ ಇದರ ಆಶ್ರಯದಲ್ಲಿ 8ನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ ಮೊಸರು ಕುಡಿಕೆ ಉತ್ಸವ ಆದಿತ್ಯವಾರ ಹಳ್ಳಿಂಗೇರಿಯ ಶ್ರೀಅಯ್ಯಪ್ಪ ಸ್ವಾಮಿ ಮಂದಿರದ ವಠಾರದಲ್ಲಿ ನಡೆಯಿತು.

ಹಳ್ಳಿಗೇರಿ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಕೆ.ವಿ.ಭಟ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಸಿ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ ಪೂಜಾಜೆ ವಹಿಸಿದ್ದರು. ಪುತ್ತೂರು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಪುತ್ತೂರು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಾಲಕೃಷ್ಣ ಕೆದಿಲಾಯ, ಕೊಕ್ಕಡ ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ನೈಮಿಷ, ಹಳ್ಳಿಗೇರಿ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ವಿಶ್ವನಾಥ ಕೊಡಿಂಗೇರಿ, ಉದ್ಯಮಿ ಗಣೇಶ್ ಗೌಡ ಕಲಾಯಿ, ಸಮಿತಿಯ ಅಧ್ಯಕ್ಷ ಕಿಶೋರ್ ಪೂಜಾರಿ ಪುಯ್ಯೊಳೆ, ಕಾರ್ಯದರ್ಶಿ ಶರತ್ ಹಳ್ಳಿಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ದಾಮೋದರ ಅಜ್ಜಾವರ ಸ್ವಾಗತಿಸಿದರು. ಸಚಿನ್ ಬಜ ವಂದಿಸಿದರು. ಕೇಶವ ಹಳ್ಳಿಗೇರಿ ನಿರೂಪಿಸಿದರು.

ಸಾರ್ವಜನಿಕರಿಗೂ ಹಾಗೂ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಯನ್ನು ನಡೆಸಲಾಯಿತು. ಅಂತರ್ ರಾಜ್ಯ ನಿರೂಪಕ ಸುರೇಶ್ ಪಡಿಪಂಡ ಹಾಗೂ ದೀಪಕ್ ನೆಲ್ಯಾಡಿ ಪಂದ್ಯಾಟವನ್ನು ನಡೆಸಿಕೊಟ್ಟರು. ಹಿಂದೂ ಜಾಗರಣ ವೇದಿಕೆ ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಕೊಕ್ಕಡ ಘಟಕದ ಪದಾಧಿಕಾರಿಗಳು,ಸದಸ್ಯರು ಹಾಗೂ ಸ್ಥಳೀಯ ಸಂಘ ಸಂಸ್ಥೆಯವರು ಸಹಕರಿಸಿದರು.

Leave a Reply

You May Have Missed

error: Content is protected !!