ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ್ ಶಾಲೆಯಲ್ಲಿ ಗಾಂಧಿ ಜಯಂತಿ

ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ್ ಶಾಲೆಯಲ್ಲಿ ಗಾಂಧಿ ಜಯಂತಿ

ರೆಂಜಿಲಾಡಿ ಸ್ಯಾಂತೋಮ್ ವಿದ್ಯಾನಿಕೇತನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಸರ್ವಧರ್ಮ ಪ್ರಾರ್ಥನೆಯ ಮೂಲಕ ಸಭಾ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳಾದ ಪೂರ್ವಿತ್, ಜೆನಿಸ್, ಗಗನ್ ಮತ್ತು ದಿಶಾನ್ ಗಾಂಧಿ ಜಯಂತಿಯ ಕುರಿತು ಭಾಷಣ ಮಾಡಿದರು.

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಾರ್ಪಣೆ ಮಾಡಲಾಯಿತು.

ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಆಟೋ ಚಾಲಕ ಮಾಲೀಕರ ಸಂಘದ ನೇತೃತ್ವದಲ್ಲಿ ಪೇರಡ್ಕ ಬಸ್ ಸ್ಟ್ಯಾಂಡ್ ಮತ್ತು ಅಂಚೆ ಕಛೇರಿ ಹಾಗೂ ಶಾಲಾ ಪರಿಸರವನ್ನು ಸ್ವಚ್ಛ ಮಾಡಲಾಯಿತು.

ಶಾಲಾ ಸಂಚಾಲಕ ರೆ.ಫಾ.ಪೌಲ್ ಜೇಕಬ್, ಶಾಲಾ ಮುಖ್ಯಶಿಕ್ಷಕಿ ಜ್ಯೋತಿ.ಎಸ್.ಕೆ ಮತ್ತು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!