ನೆಲ್ಯಾಡಿ ಜೇಸಿಐಯಿಂದ ಗಾಂಧಿಜಯಂತಿ ಆಚರಣೆ

ನೆಲ್ಯಾಡಿ ಜೇಸಿಐಯಿಂದ ಗಾಂಧಿಜಯಂತಿ ಆಚರಣೆ

ನೆಲ್ಯಾಡಿ ಜೇಸಿಐಯಿಂದ ಗಾಂಧಿಜಯಂತಿ ಪ್ರಯುಕ್ತ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಗಾಂಧಿ ಪ್ರತಿಮೆಗೆ ಜೇಸಿಐ ಅಧ್ಯಕ್ಷೆ ಸುಚಿತ್ರ ಬಂಟ್ರಿಯಾಲ್ ಮಾಲಾರ್ಪಣೆ ಮಾಡಿದರು.

ಜೇಸಿಐ ನ ಪೂರ್ವಾಧ್ಯಕ್ಷ ಪುರಂದರ ಗೌಡ ಡೆಂಜ ಅವರು ರಾಷ್ಟ್ರೀಯತೆ, ತ್ಯಾಗ, ಸತ್ಯ ಹಾಗೂ ಅಹಿಂಸೆಯ ಮಾರ್ಗ ಇಂದಿನ ಯುವ ಪೀಳಿಗೆಗೆ ಅತಿ ಅಗತ್ಯವಾದ ಮೌಲ್ಯಗಳಾಗಿದೆ ಆದ್ದರಿಂದ ಇಂತಹ ಮಹಾತ್ಮರ ಜಯಂತಿಯ ಆಚರಣೆ, ಉದ್ದೇಶವನ್ನು ಅರ್ಥೈಸಿಕೊಂಡು ಅನುಸರಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಬಳಿಕ ಮೈದಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಜೇಸಿಐಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!