ಕೌಕ್ರಾಡಿ -ನೆಲ್ಯಾಡಿ ಪೇಟೆ ಸ್ವಚ್ಛತಾ ಕಾರ್ಯಕ್ರಮ

ಕೌಕ್ರಾಡಿ -ನೆಲ್ಯಾಡಿ ಪೇಟೆ ಸ್ವಚ್ಛತಾ ಕಾರ್ಯಕ್ರಮ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಅ.2ರಂದು ಕೌಕ್ರಾಡಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಗಾಂಧೀಜಿಯ ಭಾವಚಿತ್ರಕ್ಕೆ ಹೂವು ಹಾಕಿ ನಮನವನ್ನು ಸಲ್ಲಿಸಿದರು.

ನಂತರ ಕೌಕ್ರಾಡಿ -ನೆಲ್ಯಾಡಿ ಪೇಟೆಯ ರಸ್ತೆ ಬದಿ ಸ್ವಚ್ಛತೆ ಮಾಡಲಾಯಿತು. ಕೌಕ್ರಾಡಿ ಗ್ರಾಮ ಪಂಚಾಯಿತಿ ಅಧಕ್ಷ ಲೋಕೇಶ್ ಬಾಣಜಾಲು, ಪಂಚಾಯಿತಿ ಕಾರ್ಯದರ್ಶಿ ದೇವಿಕಾ, ಪಂಚಾಯಿತಿ ಸದಸ್ಯರು, ಪಂಚಾಯಿತಿ ಸಿಬ್ಬಂದಿ ವರ್ಗ, ನೆಲ್ಯಾಡಿ ವಲಯ ಜನಜಾಗೃತಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಘಟಕ ಪ್ರತಿನಿಧಿ ರಮೇಶ್ ಬಾಣಜಾಲು, ವಲಯ ಮೇಲ್ವಿಚಾರಕ ಆನಂದ ಡಿ.ಬಿ, ಘಟಕ ಸಂಯೋಜಕಿ ನಮಿತಾ.ಎಸ್ ಶೆಟ್ಟಿ ಮತ್ತು 17 ಮಂದಿ ಘಟಕ ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

You May Have Missed

error: Content is protected !!