ನೆಲ್ಯಾಡಿ ಶ್ರೀಹಿರನ್ಮಯಿ ಮಹಿಳಾ ಯಕ್ಷಗಾನ ಕಲಾ ಸಂಘ ಉದ್ಘಾಟನೆ

ನೆಲ್ಯಾಡಿ ಶ್ರೀಹಿರನ್ಮಯಿ ಮಹಿಳಾ ಯಕ್ಷಗಾನ ಕಲಾ ಸಂಘ ಉದ್ಘಾಟನೆ

ನೆಲ್ಯಾಡಿಯಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಭಾಗವತ ಲಕ್ಷ್ಮೀನಾರಾಯಣ ಶೆಟ್ಟಿ ಕುಂಡಡ್ಕ ಅವರ ಸಾರಥ್ಯದಲ್ಲಿ ಮಹಿಳಾ ಯಕ್ಷಗಾನ ಕಲಾ ಸಂಘ ಅ.3 ರಂದು ಉದ್ಘಾಟನೆಗೊಂಡಿತು.

ಯಕ್ಷಪ್ರೇಮಿ ಆನಂದ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ನೆಲ್ಯಾಡಿ ಗ್ರಾಮ ಪಂಚಾಯಿತಿನ ಜಯಾನಂದ ಬಂಟ್ರಿಯಾಲ್ ಮಾತನಾಡಿ ಈ ಮಹಿಳಾ ಯಕ್ಷಗಾನ ಕಲಾತಂಡವು ಉತ್ತಮವಾದ ತಂಡವಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಲತೀಶ್ ಯಕ್ಷಗಾನ ಕಲಾವಿದ ಸುಂದರ ಗೌಡ, ಮಹಾಬಲ ಶೆಟ್ಟಿ, ಚಂದ್ರಹಾಸ ಶೆಟ್ಟಿ ಕುಂಡಡ್ಕ, ಸಂತ ಚಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ್ ಶೆಟ್ಟಿ ಹಾಗೂ ಶ್ರೀಹಿರನ್ಮಯಿ ಮಹಿಳಾ ಯಕ್ಷಗಾನ ಕಲಾ ಸಂಘದ ಕಲಾವಿದರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!