ಜೇಸಿಐ ಸುಳ್ಯ ಸಿಟಿ ವತಿಯಿಂದ ಪರೀಕ್ಷಾ ಪೂರ್ವತಯಾರಿ ಮತ್ತು ಮೌನ ಸಾಧಕ ಪ್ರಶಸ್ತಿ ಪ್ರದಾನ

ಜೇಸಿಐ ಸುಳ್ಯ ಸಿಟಿ ವತಿಯಿಂದ ಪರೀಕ್ಷಾ ಪೂರ್ವತಯಾರಿ ಮತ್ತು ಮೌನ ಸಾಧಕ ಪ್ರಶಸ್ತಿ ಪ್ರದಾನ

ನೇಸರ ಫೆ.27: ಜೇಸಿಐ ಸುಳ್ಯ ಸಿಟಿ ವತಿಯಿಂದ ಫೆ.26 ಶನಿವಾರದಂದು ಸರಕಾರಿ ಪ್ರೌಢಶಾಲೆ ಎಣ್ಮೂರು ನಿಂತಿಕಲ್ಲಿನಲ್ಲಿ ಪರೀಕ್ಷಾ ಪೂರ್ವ ತಯಾರಿ ತರಬೇತಿ ಮತ್ತು ಮೌನ ಸಾಧಕರನ್ನು ಗೌರವಿಸಲಾಯಿತು ವಲಯ ತರಬೇತುದಾರರಾದ ಜೇಸಿ.ಪ್ರದೀಪ್ ಬಾಕಿಲ ರವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ತರಬೇತಿಯನ್ನು ನೀಡಿದರು.

ಮನೆ ಹಸ್ತಾಂತರ ವೀಕ್ಷಿಸಿ Subscribers ಮಾಡಿ

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶೀತಲ್.ಯು.ಕೆ ಮತ್ತು ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಮಹಮ್ಮದ್ ಅಲಿ ರವರಿಗೆ ಮೌನ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಂಜ ಪಂಚಶ್ರೀ ಪೂರ್ವ ಅಧ್ಯಕ್ಷರಾದ ಜೇಸಿ.ಶಶಿಧರ ಪಳಂಗಾಯ ಮತ್ತು ವಲಯಾಧಿಕಾರಿಯಾದ ತೀರ್ಥವರ್ಣ ಬಳ್ಳಡ್ಕ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷರಾದ ಚಂದ್ರಶೇಖರ್ ಕನಕಮಜಲು,ಕಾರ್ಯಕ್ರಮ ಸಂಯೋಜಕರಾದ ಕೃತಿಕಾ ಕನಕಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕಾಧ್ಯಕ್ಷ ಬಶೀರ್.ಯು.ಪಿ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಅಶ್ವಥ್ ಅಡ್ಕಾರ್ ವಂದಿಸಿದರು ಸಮಾರಂಭದಲ್ಲಿ ಘಟಕದ ಸ್ಥಾಪಕ ಮನಮೋಹನ್ ಬಳ್ಳಡ್ಕ,ಪೂರ್ವ ಅಧ್ಯಕ್ಷರಾದ ವಿನಯ ರಾಜ್ ಮಡ್ತಿಲ.ಜೇಸಿ ಸದಸ್ಯರಾದ ರಂಜಿತ್.ಪಿ.ಜೆ,ಶಾಫಿ ಕಲ್ಲೇರಿ, ಮತ್ತು ಅಧ್ಯಾಪಕರು,ವಿದ್ಯಾರ್ಥಿಗಳು ಭಾಗವಹಿಸಿದರು.

—ಜಾಹೀರಾತು—

Leave a Reply

You May Have Missed

error: Content is protected !!