ಪುದುವೆಟ್ಟು: ಮರದಿಂದ ಬಿದ್ದು ವ್ಯಕ್ತಿ ಸಾವು

ಪುದುವೆಟ್ಟು: ಮರದಿಂದ ಬಿದ್ದು ವ್ಯಕ್ತಿ ಸಾವು

ಪುದುವೆಟ್ಟು ಗ್ರಾಮದ ಮಿಯಾರ್ ಬಳಿ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಅ.04ರಂದು ನಡೆದಿದೆ.

ಮೃತ ವ್ಯಕ್ತಿ ಶಿಶಿಲದ ಕಾರೆಗುಡ್ಡೆ ನಿವಾಸಿ ಪ್ರವೀಣ್(35) ಎಂದು ಗುರುತಿಸಲಾಗಿದೆ. ಮಿಯಾ‌ರ್ ಸಮೀಪ ಕೂಲಿ ಕೆಲಸಕ್ಕೆಂದು ಆಗಮಿಸಿದ ಇವರು ಮರದ ಗೆಲ್ಲು ತೆಗೆಯುತಿದ್ದ ವೇಳೆ ಮರದಲ್ಲೇ ಅಸ್ವಸ್ಥಗೊಂಡು ಆಯತಪ್ಪಿ ಕೆಳಗೆ ಬಿದಿದ್ದಾರೆ. ಅಲ್ಲಿದ್ದವರು ತಕ್ಷಣ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು.

ಮೃತರಿಗೆ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ

Leave a Reply

You May Have Missed

error: Content is protected !!