ಕೌಕ್ರಾಡಿ ಸಂತ ಜೋನರ ಬ್ಯಾಪ್ಟಿಸ್ತರ ದೇವಾಲಯದಲ್ಲಿ “ಗದ್ಯಾಂತ್ ಏಕ್ ದೀಸ್”

ಕೊಕ್ಕಡ: ಸಂತ ಜೋನರ ಬ್ಯಾಪ್ಟಿಸ್ತರ ದೇವಾಲಯದಲ್ಲಿ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ ಕೊಕ್ಕಡ ಘಟಕವು “ಗದ್ಯಾಂತ್ ಏಕ್ ದೀಸ್” ನಡೆಯಿತು

ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮಗುರು ಗ್ರೇಶನ್ ಅಲ್ವಾರಿಸ್ ಅವರು ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಕೊಕ್ಕಡ ದೇವಾಲಯದ ಧರ್ಮಗುರು ಅನಿಲ್ ಪ್ರಕಾಶ್ ಡಿ’ಸಿಲ್ವ ವಹಿಸಿದರು.

ವೇದಿಕೆಯಲ್ಲಿ ಕೊಕ್ಕಡ ದೇವಾಲಯದ ಧರ್ಮಗುರು ಫಾ.ಅನಿಲ್ ಪ್ರಕಾಶ್ ಡಿ’ಸಿಲ್ವ, ಬಾಲಯೇಸು ದೇವಾಲಯ ನೆಲ್ಯಾಡಿಯ ಧರ್ಮಗುರು ಫಾ.ಗ್ರೇಶನ್ ಅಲ್ವಾರಿಸ್, ಸಿ. ಸ್ಟ್ರೆಲ್ಲಾ, ಸಿ.ಜಾಕಲಿನ್, ಚರ್ಚ್ ನ ಉಪಾಧ್ಯಕ್ಷ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನಸ್, ಸಂಚಾಲಕಿ ವಿನ್ನಿಫ್ರೆಡ್ ಡಿ’ಸೋಜ, ಐ.ಸಿ.ವೈ.ಎಮ್ ಕೊಕ್ಕಡ ಘಟಕದ ಆನಿಮೇಟರ್ ಜಯಂತ್ ಡಿಸೋಜ, ಅಧ್ಯಕ್ಷೆ ಸಹನಾ ಡಿ’ಸೋಜ, ಕಾರ್ಯದರ್ಶಿ ವಿನೀತ್ ಮೊಂತೆರೋ, ಕ್ರೀಡಾ ಕಾರ್ಯದರ್ಶಿ ಜಾನ್ಸನ್ ಪಾಯ್ಸ್, ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.
ಸೃಜನಾತ್ಮಕ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ದೇವಾಲಯದ 6 ವಾಳ್ಯದ ಸದಸ್ಯರು ನಡೆಸಿದ ಪಥ ಸಂಚಲನವು ಎಲ್ಲರನ್ನು ಆಕರ್ಷಿಸಿತು. ಐ.ಸಿ.ವೈ.ಎಮ್ ಸದಸ್ಯರಿಂದ ಪ್ರಾರ್ಥನೆ, ಐ.ಸಿ.ವೈ.ಎಮ್ ಅಧ್ಯಕ್ಷೆ ಸಹನಾ ಡಿ’ಸೋಜ ಸ್ವಾಗತಿಸಿದರು, ಕಾರ್ಯದರ್ಶಿ ವಿನೀತ್ ಮೊಂತೇರೊ ವಂದಿಸಿದರು. ಸಭಾ ಕಾರ್ಯಕ್ರಮವನ್ನು ವಿಲ್ಸಿಟಾ ಮೊಂತೇರೊ ನಿರೂಪಿಸಿದರು. ಎಲ್ಲಾ ಸ್ಪರ್ಧೆಗಳನ್ನು ಐ.ಸಿ.ವೈ.ಎಮ್ ಸಂಘಟಣೆಯು ನೆರವೇರಿಸಿ ಸಂಘಟಿಸಿತು. ಕಾರ್ಯಕ್ರಮದ ಹಿತಚಿಂತಕರನ್ನು ಗುರುತಿಸಿ ಅವರ ಕೊಡುಗೆಗಾಗಿ ಗೌರವಿಸಲಾಯಿತು.























Leave a Reply